ಮುಂದಿನ ಟಿ20 ವಿಶ್ವಕಪ್‌ ಭಾರತ ತಂಡ ಗೆಲ್ಲುವುದು ಅನುಮಾನವೆಂದ ಕೆ ಶ್ರೀಕಾಂತ್‌



(ನ್ಯೂಸ್ಕಡಬ) newskadaba.com . 28. ಮುಂಬರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಗೆ ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿಯು ಸೂರ್ಯಕುಮಾರ್‌ ನಾಯಕತ್ವದಲ್ಲಿ 15 ಸದಸ್ಯರನ್ನೊಳಗೊಂಡ ಭಾರತ ತಂಡವನ್ನು ಆಯ್ಕೆ ಮಾಡಿದ್ದು, ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಆಲ್‌ರೌಂಡರ್‌ ವಿಭಾಗದಲ್ಲಿ ತಂಡ ಬಲಿಷ್ಠವಾಗಿದೆ ಎನ್ನಲಾಗಿದೆ.





 

ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಗೊಂದಲ ಹೊರತುಪಡಿಸಿ ಇನ್ನೆಲ್ಲಾ ವಿಭಾಗದಲ್ಲೂ ತಂಡದ ಆಯ್ಕೆ ಅತ್ಯುತ್ತಮವಾಗಿದೆ. ಮುಂಬರುವ ಟಿ-20 ವಿಶ್ವಕಪ್‌ಗೆ ಕೆಲವು ಸಣ್ಣಪುಟ್ಟ ಬದಲಾವಣೆಗಳ ಅಗತ್ಯವಿದ್ದು, ಅದನ್ನು ಹೊರತುಪಡಿಸಿದರೆ ಆಯ್ಕೆ ಸಮಿತಿ ಬೇರೆ ಯೋಚಿಸುವ ಅಗತ್ಯ ಇಲ್ಲ ಎಂದು ಹಲವು ಮಾಜಿ ಕ್ರಿಕೆಟಿಗರು ಸಲಹೆಯನ್ನು ನೀಡುತ್ತಿದ್ದಾರೆ. ಇದರ ನಡುವೆ ತಮಿಳುನಾಡು ಕ್ರಿಕೆಟಿಗ ಕ್ರಿಸ್‌ ಶ್ರೀಕಾಂತ್‌ ಮಹತ್ವದ ಹೇಳಿಕೆ ನೀಡಿದ್ದು, ಏಷ್ಯಾಕಪ್‌ನಲ್ಲಿ ಭಾರತ ತಂಡಕ್ಕೆ ಉತ್ತಮ ಅವಕಾಶಗಳಿದ್ದರೂ ಮುಂಬರುವ ಟಿ20 ವಿಶ್ವಕಪನಲ್ಲಿ ಭಾರತ ತಂಡದ ಅವಕಾಶದ ಬಗ್ಗೆ ಅನುಮಾನ ಎಂದು ಭವಿಷ್ಯ ನುಡಿದಿದ್ದಾರೆ.






ಈ ಬಗ್ಗೆ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಸುದೀರ್ಘ ವಿಡಿಯೋವೊಂದನ್ನು ಹಂಚಿಕೊಂಡಿರುವ ಕ್ರಿಸ್‌ ಶ್ರೀಕಾಂತ್‌, “ಈ ತಂಡದೊಂದಿಗೆ ನಾವು ಏಷ್ಯಾ ಕಪ್ ಗೆಲ್ಲಬಹುದು, ಆದರೆ ಈ ಗುಂಪಿನೊಂದಿಗೆ ಟಿ20 ವಿಶ್ವಕಪ್ ಗೆಲ್ಲುವ ಯಾವುದೇ ಅವಕಾಶವಿಲ್ಲ. ನೀವು ಈ ತಂಡವನ್ನು ವಿಶ್ವಕಪ್‌ಗೆ ಕರೆದೊಯ್ಯುತ್ತೀರಾ?  6 ತಿಂಗಳಷ್ಟೇ ದೂರದಲ್ಲಿರುವ ಟಿ20 ವಿಶ್ವಕಪ್‌ಗೆ ಇದು ತಯಾರಿಯೇ?” ಎಂದು ಹೇಳಿದ್ದಾರೆ.

error: Content is protected !!
Scroll to Top