(ನ್ಯೂಸ್ ಕಡಬ) newskadaba.com ಆ. 28. 1,500ನೇ ವರ್ಷದ ಮೀಲಾದ್ ಕಾರ್ಯಕ್ರಮದ ಪ್ರಯುಕ್ತ ಸುನ್ನೀ ಮೇನೇಜ್ಮೆಂಟ್ ಅಸೋಸಿಯೇಷನ್ (ಎಸ್.ಎಂ.ಎ) ಬೈತಡ್ಕ ರೀಜನಲ್ ವತಿಯಿಂದ ಮೊಹಲ್ಲಾ ಸಂಗಮ ಕಾರ್ಯಕ್ರಮವು ಮಂಗಳವಾರ ರಾತ್ರಿ ಬೈತಡ್ಕ ಮದ್ರಸ ಸಭಾಂಗಣದಲ್ಲಿ SMA ಬೈತಡ್ಕ ರೀಜನಲ್ ಅಧ್ಯಕ್ಷರಾದ ಸಿದ್ದೀಕ್ ಅಲೆಕ್ಕಾಡಿರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಷಿ ಹಾಗೂ ಕಲಂ ಬಳಸಿ ಬರಹ ಮೂಲಕ ಹೃಸ್ವ ಅವಧಿಯಲ್ಲಿ ಪರಿಶುದ್ಧ ಕುರ್ಆನ್ ನ 30 ಕಾಂಡ ಬರೆದು ಅದ್ಭುತ ಸಾಧನೆ ಮಾಡಲು ತನ್ನ ಮಗಳಾದ ಸಜ್ಲ ಇಸ್ಮಾಯಿಲ್ ರಿಗೆ ಪ್ರೋತ್ಸಾಹ ನೀಡಿ ಯಶಸ್ವಿಯಾಗಿ ಮಾದರಿಯಾದ ತಂದೆ ಬಿ.ಪಿ ಇಸ್ಮಾಯಿಲ್ ಹಾಜಿ ಬೈತಡ್ಕ ರವರನ್ನು ಸನ್ಮಾನಿಸಲಾಯಿತು.
ಬೈತಡ್ಕ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ನ ಮುದರ್ರಿಸರಾದ ಬಹು| ಸಫ್ವಾನ್ ಜೌಹರಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸದರ್ ಉಸ್ತಾದರಾದ ಬಹು| ಇಬ್ರಾಹಿಂ ಸಖಾಫಿ ಪುಂಡೂರು ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಖ್ಯಾತ ವಾಗ್ಮಿ ಅನಸ್ ಅಮಾನಿ ಪುಷ್ಪಗಿರಿ ರವರು ಮುಖ್ಯ ಭಾಷಣ ಮಾಡಿದರು.
ಕೊನೆಯಲ್ಲಿ ದಫ್ ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ಎಸ್.ಎಂ.ಎ ಝೋನಲ್ ಅಧ್ಯಕ್ಷರಾದ ಇಬ್ರಾಹಿಂ ಬೀಡು, ಬಹು|ಲತೀಫ್ ಮುಸ್ಲಿಯಾರ್ ಕೂರ, ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಅಧ್ಯಕ್ಷರಾದ ಪಿ.ಬಿ ಇಕ್ಬಾಲ್ ಹಾಜಿ ಬೈತಡ್ಕ, ಬೈತಡ್ಕ ರೀಜನಲ್ ಕೋಶಾಧಿಕಾರಿ ಸಾಬು ಹಾಜೆ ಕೆಲೆಂಬಿರಿ, ಬೈತಡ್ಕ ಉದಯಾಸ್ತಮಾನ ಉರೂಸ್ ಅಧ್ಯಕ್ಷರಾದ ಬಿಪಿ ಹಮೀದ್ ಹಾಜಿ ಬೈತಡ್ಕ, ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಖತೀಬರಾದ ಬಹು|ರಫೀಕ್ ನಿಝಾಮಿ ಕೊಟ್ಟಮುಡಿ, ಬದ್ರಿಯಾ ಜುಮ್ಮಾ ಮಸ್ಜಿದ್ ಪುಂಚತ್ತಾರು ಖತೀಬರಾದ ಹಾರೂನ್ ಅಹ್ಸನಿ, ಬದ್ರಿಯಾ ಜುಮ್ಮಾ ಮಸ್ಜಿದ್ ಕರಿಂಬಿಲ ಖತೀಬರಾದ ಬಹು| ಅನ್ಸಾರ್ ಫಾಳಿಲಿ, ಪಳ್ಳತ್ತಾರು ಮಸೀದಿ ಖತೀಬರಾದ ಬಹು|ಶರೀಫ್ ಸಖಾಫಿ ಪಳ್ಳತ್ತಾರು, ಎಸ್.ಎಂ.ಎ ಝೋನಲ್ ಕೋಶಾಧಿಕಾರಿ ಸಾದಿಕ್ ಸಮಹಾದಿ, ಬೈತಡ್ಕ ಜಮಾಅತ್ ಕೋಶಾಧಿಕಾರಿ ಬಿ.ಪಿ ಅಬ್ದುಲ್ ರಹ್ಮಾನ್ ಹಾಜಿ, ಬೈತಡ್ಕ ಜಮಾಅತ್ ಉಪಾಧ್ಯಕ್ಷರಾದ ಮಹಮ್ಮದ್ ಅಲೆಕ್ಕಾಡಿ, ಉದಯಾಸ್ತಮಾನ ಉರೂಸ್ ಸಮಿತಿ ಕಾರ್ಯದರ್ಶಿ ಶರೀಫ್ ಕೂಡುರಸ್ತೆ, ಪ್ರಮುಖರಾದ ಇಸ್ಮಾಯಿಲ್ ಪಡ್ಪಿನಂಗಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.









