ಖಾಲಿ ಹೊಟ್ಟೆಯಲ್ಲಿ ನಿಂಬೆ ಜ್ಯೂಸ್‌ ಕುಡಿಯುವ ಅಭ್ಯಾಸ ಇದೆಯಾ..?



(ನ್ಯೂಸ್‌ ಕಡಬ) newskadaba.com, ಆ.27:‌‌ ಕೆಲವು ಮಂದಿ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನಿಂಬೆ ಜ್ಯೂಸ್ಸೇವನೆ ಮಾಡುತ್ತಾರೆ. ಅಭ್ಯಾಸ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದ್ದರೂ ಕೂಡ ಇದರಿಂದ ಹಲವಾರು ಅಡ್ಡಪರಿಣಾಮಗಳಿವೆ. ಹಾಗಾದರೆ ಇದರ ಸೇವನೆಯಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ? ಏಕೆ? ಎಂಬುದನ್ನು ತಿಳಿಯಿರಿ.





ಖಾಲಿ ಹೊಟ್ಟೆಯಲ್ಲಿ ನಿಂಬೆ ರಸವನ್ನು ಕುಡಿಯುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ನಿಂಬೆಯಲ್ಲಿರುವ ಆಮ್ಲೀಯತೆ ಮೂಳೆಗಳಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ. ಅವುಗಳನ್ನು ದುರ್ಬಲಗೊಳಿಸುತ್ತದೆ. ಇದು ವಯಸ್ಸಾದಂತೆ ಮೂಳೆ ಸಮಸ್ಯೆಗಳಿಗೆ ಕಾರಣವಾಗಬಹುದು.






ನಿಂಬೆಯಲ್ಲಿರುವ ಆಮ್ಲೀಯತೆಯು ದಂತವನ್ನು ಹಾನಿಗೊಳಿಸುತ್ತದೆ. ಇದು ಹಲ್ಲುಗಳ ಬಲವನ್ನು ಕಡಿಮೆ ಮಾಡುತ್ತದೆ.

ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಕುಡಿಯುವುದರಿಂದ ನಿರ್ಜಲೀಕರಣ ಹೆಚ್ಚುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ನಿಂಬೆ ರಸವನ್ನು ಮಿತವಾಗಿ ಸೇವಿಸಬೇಕು.

ಖಾಲಿ ಹೊಟ್ಟೆಯಲ್ಲಿ ನಿಂಬೆ ಜ್ಯೂಸ್ಕುಡಿಯುವುದರಿಂದ ಹೊಟ್ಟೆಯಲ್ಲಿ ಅತಿಯಾದ ಆಮ್ಲ ಉತ್ಪಾದನೆ ಉಂಟಾಗುತ್ತದೆ. ಇದರಿಂದ ಆಮ್ಲೀಯತೆ, ಎದೆಯುರಿ, ವಾಂತಿ ಹಾಗೂ ಅನಿಲದಂತಹ ಸಮಸ್ಯೆಗಳು ಕಾಡಬಹುದು.

ನಿಂಬೆಯಲ್ಲಿರುವ ಕೆಲವು ಗುಣಗಳು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಹೆಚ್ಚಿಸಬಹುದು. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ನಿಂಬೆ ಜ್ಯೂಸ್ಕುಡಿಯುವುದು ಒಳ್ಳೆಯದಲ್ಲ.

error: Content is protected !!
Scroll to Top