(ನ್ಯೂಸ್ ಕಡಬ) newskadaba.com, ಆ.27: ಆಸ್ಟ್ರೇಲಿಯಾ–ನ್ಯೂಝಿಲೆಂಡ್ ನಡುವಿನ ಟಿ20 ಸರಣಿಯು ಅ.1ರಿಂ ಆರಂಭವಾಗಲಿದೆ. ನ್ಯೂಝಿಲೆಂಡ್ನ ಮೂವರು ಆಟಗಾರರು ಈ ಸರಣಿಯಿಂದ ಹೊರಬಿದ್ದಿದ್ದಾರೆ.
ತಂಡದ ಪ್ರಮುಖ ವೇಗಿ ವಿಲಿಯಂ ಒರೋಕ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಮೂರು ವಾರಗಳ ಕಾಲ ಕ್ರಿಕೆಟ್ ಅಂಗಳದಿಂದ ದೂರ ಉಳಿಯಲಿದ್ದಾರೆ. ಆರಂಭಿಕ ಆಟಗಾರ ಫಿನ್ ಅಲೆನ್ ಅವರ ಬಲಗಾಲಿಗೆ ಗಾಯವಾಗಿದ್ದು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕಾರಣದಿಂದ ಅವರು ಆಸ್ಟ್ರೇಲಿಯಾ ವಿರುದ್ದದ ಸರಣಿಗೆ ಅಲಭ್ಯರಾಗಿದ್ದಾರೆ. ಆಲ್ರೌಂಡರ್ ಗ್ಲೆನ್ ಫಿಲಿಪ್ಸ್ ಅವರು ತೊಡೆಸಂದು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಫಿಲಿಪ್ಸ್ ಅವರು ಇನ್ನು ಒಂದು ತಿಂಗಳ ಕಾಲ ಮೈದಾನಕ್ಕೆ ಇಳಿಯುವಂತಿಲ್ಲ. ಇನ್ನೊಂದೆಡೆ ಮಿಚೆಲ್ ಸ್ನಾಂಟ್ನರ್ ಕೂಡ ತೊಡೆಸಂದು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಇದೀಗ ವಿಶ್ರಾಂತಿಯಲ್ಲಿರುವ ಸ್ಯಾಂಟ್ನರ್ ಆಸ್ಟ್ರೇಲಿಯಾ ವಿರುದ್ದದ ಸರಣಿ ಆರಂಭಕ್ಕೂ ಮೊದಲು ಸಂಪೂರ್ಣ ಫಿಟ್ ಆಗುವ ನಿರೀಕ್ಷೆ ಇದೆ.
ನ್ಯೂಝಿಲೆಂಡ್ vs ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ವೇಳಾಪಟ್ಟಿ:
ಮೊದಲ ಟಿ20 ಪಂದ್ಯ, ಬೇ ಓವಲ್, ಬುಧವಾರ, 1 ಅಕ್ಟೋಬರ್ 2025
ಎರಡನೇ ಟಿ20 ಪಂದ್ಯ, ಬೇ ಓವಲ್, ಶುಕ್ರವಾರ, 3 ಅಕ್ಟೋಬರ್ 2025
ಮೂರನೇ ಟಿ20 ಪಂದ್ಯ, ಬೇ ಓವಲ್, ಶನಿವಾರ, 4 ಅಕ್ಟೋಬರ್ 2025
ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಎಲ್ಲಾ ಪಂದ್ಯಗಳು ನ್ಯೂಝಿಲೆಂಡ್ನ ಮೌಂಟ್ ಮೌಂಗನುಯಿನಲ್ಲಿರುವ ಬೇ ಓವಲ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.














