ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಅಳಿಕೆ ವಲಯದಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ



(ನ್ಯೂಸ್ ಕಡಬ) newskadaba.com ವಿಟ್ಲ, ಆ. 26. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ.) ಅಳಿಕೆ ವಲಯದ ಜನಜಾಗೃತಿ ಕಾರ್ಯಕ್ರಮದಡಿಯಲ್ಲಿ ಸ್ಥಾಸ್ಯ ಸಂಕಲ್ಪ ಕಾರ್ಯಕ್ರಮವು ಶ್ರೀಸತ್ಯ ಸಾಯಿ ಲೋಕಸೇವಾ ಪ್ರೌಢ ಶಾಲೆ ಅಳಿಕೆಯಲ್ಲಿ ನಡೆಸಲಾಯಿತು.







ಶಾಲಾ ಅಧ್ಯಾಪಕರಾದ ನಾರಾಯಣರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಸಣ್ಣಗುತ್ತು, ಒಕ್ಕೂಟ ಪದಾಧಿಕಾರಿಯಾದ ವಿಜಯಲಕ್ಷಿ ಮೊದಲಾದವರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ಹಾಗೂ ಜನಜಾಗೃತಿ ವಲಯಾಧ್ಯಕ್ಷರಾದ ಬಾಲಕೃಷ್ಣ ಕಾರಂತ್ ಎರುಂಬು ಇವರು ಮಕ್ಕಳಿಗೆ ಮುಂದಿನ ಜೀವನದಲ್ಲಿ ಶಿಸ್ತನ್ನು ಆಳವಡಿಸಿಕೊಳ್ಳಬೇಕು ಹಾಗೂ ದುಶ್ಚಟಗಳ ಅರಿವು ಮೂಡಿಸುವ ಬಗ್ಗೆ ಮಾಹಿತಿ ನೀಡಿದರು.






ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕಿಯಾದ ಮೀನಾಕ್ಷಿ ನಿರ್ವಹಿಸಿ, ಸೇವಾಪ್ರತಿನಿಧಿ ಚಂದ್ರಾವತಿಯವರು ಸ್ವಾಗತಿಸಿ ವಂದಿಸಿದರು.

error: Content is protected !!
Scroll to Top