ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರೆ ► ಭಾರತಕ್ಕೆ ಮೂರನೇ ಸ್ಥಾನ

(ನ್ಯೂಸ್ ಕಡಬ) newskadaba.com ಆಸ್ಟೇಲಿಯಾ, ಎ.16. ಆಸ್ಟೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಎಪ್ರಿಲ್ 4ರಿಂದ ಪ್ರಾರಂಭಗೊಂಡ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಎಪ್ರಿಲ್ 15ನೇ ಆದಿತ್ಯವಾರದಂದು ತೆರೆ ಬಿದ್ದಿದೆ. ಪದಕ ಗಳಿಕೆಯಲ್ಲಿ ಭಾರತವು ಮೂರನೇ ಸ್ಥಾನವನ್ನು ಪಡೆದು ಕೊಂಡಿದೆ.

2018ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ಒಟ್ಟು 66 ಪದಕಗಳನ್ನು ಗೆದ್ದಿದ್ದು, ಇವುಗಳಲ್ಲಿ 26 ಚಿನ್ನ, 20 ಬೆಳ್ಳಿ ಹಾಗು 20 ಕಂಚಿನ ಪದಕಗಳಾಗಿವೆ. ಪದಕ ಗಳಿಕೆಯಲ್ಲಿ ಒಟ್ಟು 198 ಪದಕಗಳನ್ನು ಪಡೆದು ಆಸ್ಟೇಲಿಯಾವು ಮೊದಲ ಸ್ಥಾನದಲ್ಲಿದೆ ಹಾಗು ಒಟ್ಟು 136 ಪದಕಗಳನ್ನು ತಮ್ಮದಾಗಿಸಿಕೊಂಡ ಇಂಗ್ಲೆಂಡ್ ಎರಡನೆ ಸ್ಥಾನದಲ್ಲಿದೆ.

Also Read  ರಫೆಲ್‌ ನಡಾಲ್‌ ಸೋಲಿನೊಂದಿಗೆ ಟೆನಿಸ್‌ ​ವೃತ್ತೀಜಿವನಕ್ಕೆ ವಿದಾಯ

ಈ ಹಿಂದೆ 2010ರಲ್ಲಿ ನವ ದೆಹಲಿಯಲ್ಲಿ ಯಶಸ್ವಿಯಾಗಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು 38 ಚಿನ್ನದ ಪದಕಗಳು ಸೇರಿದಂತೆ ಒಟ್ಟು 101 ಪದಕಗಳನ್ನು ಪಡೆದುಕೊಂಡಿತ್ತು.

error: Content is protected !!
Scroll to Top