(ನ್ಯೂಸ್ ಕಡಬ) newskadaba.com, ಕಡಬ, ಆ. 25. ಪಾರ್ಟ್ ಟೈಮ್ ಜಾಬ್ ಆಮಿಷಕ್ಕೆ ಒಳಗಾಗಿ ಕಡಬದ ಮಹಿಳೆಯೊಬ್ಬರು 1.35 ಲಕ್ಷ ರೂ. ಕಳೆದುಕೊಂಡ ಘಟನೆ ವರದಿಯಾಗಿದೆ.
ಮಹಿಳೆ ಆ.20ರಂದು ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ವರ್ಕ್ ಫ್ರಮ್ ಹೋಮ್ ಎಂಬ ಜಾಹೀರಾತಿನೊಂದಿಗೆ ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿದಾಗ ವಾಟ್ಸಪ್ ತೆರೆದಿದ್ದು, ಅದರಲ್ಲಿ ಪಾರ್ಟ್ ಟೈಮ್ ಜಾಬ್ ನೀಡುವುದಾಗಿಯೂ ನೀವು ಮಾಡಿದ ಕೆಲಸಕ್ಕೆ 20% ಕಮಿಷನ್ ಹಣ ಗಳಿಸಬಹುದು ಎಂಬುದಾಗಿ ತಿಳಿಸಲಾಗಿತ್ತು. ಅಲ್ಲದೇ ಲಿಂಕ್ ನ್ನು ಕ್ಲಿಕ್ ಮಾಡಿ ಪ್ರಾಡಕ್ಟ್ ರಿವ್ಯೂ ಮಾಡಿ ಲೈಕ್ ನೀಡಿ ಸ್ಕ್ರೀನ್ ಶಾಟ್ ತೆಗೆದು ಬಳಿಕ ವಾಟ್ಸಪ್ಪ್ ನಂಬ್ರಕ್ಕೆ ಕಳುಹಿಸಿ ಟಾಸ್ಕ್ ಕಂಪ್ಲೀಟ್ ಮಾಡಲು ತಿಳಿಸಿದಂತೆ ಟಾಸ್ಕ್ ಕಂಪ್ಲೀಟ್ ಮಾಡುವ ಬಗ್ಗೆ ನಿರ್ದೇಶನ ನೀಡುತ್ತಿದ್ದರು.
ಬಳಿಕ ಹೆಚ್ಚಿನ ಹಣ ಹಾಕುವಂತೆ ಸೂಚಿಸಿದ್ದು, ದೂರುದಾರ ಅಪರಿಚಿತ ವ್ಯಕ್ತಿಗಳು ತಿಳಿಸಿದ ಯು.ಪಿ.ಐ ಐಡಿಗೆ ತನ್ನ ಬ್ಯಾಂಕ್ ಖಾತೆಯಿಂದ ಒಟ್ಟು 1.35 ಲಕ್ಷ ರೂ. ಕಳುಹಿಸಿದ್ದು, ನಂತರ ಸದ್ರಿ ಹಣವನ್ನು ವಾಟ್ಸಪ್ ಮಾಡಲು ಆಗಿರುವುದಿಲ್ಲ. ವಾಟ್ಸಪ್ ಮಾಡಲು ಕೇಳಿದಾಗ ಇನ್ನೂ ಹೆಚ್ಚಿನ ಹಣ ಹಾಕುವಂತೆ ತಿಳಿಸಿರುತ್ತಾರೆ ಎಂದು ಮಹಿಳೆ ನೀಡಿದ ದೂರಿನಂತೆ ಸಿಇಎನ್ ಅಪರಾಧ ಪೊಲೀಸ್ ಠಾಣೆ ಅ.ಕ್ರ ನಂ: 59-2025, ಕಲಂ: 66 D) IT ACT 318(4) BNS Actಯಂತೆ ಪ್ರಕರಣ ದಾಖಲಾಗಿದೆ.








