ಕೊಡಿಮಾರು ಅಬೀರ ಉಳ್ಳಾಕುಲು ಮತ್ತು ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಗೊನೆ ಮುಹೂರ್ತ 

(ನ್ಯೂಸ್ ಕಡಬ) newskadaba.com ಸವಣೂರು, ಎ.16. ಪುತ್ತೂರು ತಾಲೂಕು ಬೆಳಂದೂರು ಗ್ರಾಮದ ಕೊಡಿಮಾರು ಅಬೀರದ ಶ್ರೀ ಉಳ್ಳಾಕುಲು, ವ್ಯಾಘ್ರಚಾಮುಂಡಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ದಿನಾಂಕ 20-04-2018 ಮತ್ತು 21-04-2018ರಂದು ನಡೆಯಲಿದೆ.

ದಿನಾಂಕ 15-04-2018ರಂದು ಬೆಳಿಗ್ಗೆ ಗಂಟೆ 8.30ಕ್ಕೆ ಕಾಣಿಯೂರು ಮಠದ ಅರ್ಚಕರಾದ ವೇದಮೂರ್ತಿ ಶ್ರೀ ಬಾಲಕೃಷ್ಣ ಅಸ್ರಣ್ಣರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಗೊನೆ ಕಡಿಯುವ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ದಿನಾಂಕ 20-04-2018 ಶುಕ್ರವಾರ ಬೆಳಿಗ್ಗೆ ಗಂಟೆ 9-00ರಿಂದ ಸ್ವಸ್ತಿ ಪುಣ್ಯಹವಾಚನ, ಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ ಹಾಗೂ ತಂಬಿಲ ಮತ್ತು ರಾತ್ರಿ ಗಂಟೆ 9-30ರಿಂದ ದೈವಗಳ ಭಂಡಾರ ಹಿಡಿಯುವುದು. ದಿನಾಂಕ 21-04-2018ರ ಶನಿವಾರ ಬೆಳಿಗ್ಗೆ ಗಂಟೆ 04-00ಕ್ಕೆ ಉಳ್ಳಾಕುಲು ದೈವಗಳ ನೇಮೋತ್ಸವ, ಬೆಳಿಗ್ಗೆ ಗಂಟೆ 10-00ರಿಂದ ಬೈಸುನಾಯಕ, ಬೇಡ ದೈವಗಳ ನೇಮೋತ್ಸವ, ಗಂಟೆ 11-30ರಿಂದ ವ್ಯಾಘ್ರಚಾಮುಂಡಿ, ಗುಳಿಗ, ಪರಿವಾರ ದೈವಗಳ ನೇಮೋತ್ಸವ ಮತ್ತು ಮಧ್ಯಾಹ್ನ ಗಂಟೆ 1-00ರಿಂದ ಅನ್ನಸಂತರ್ಪಣೆ ನಡೆಯಲಿದೆ.

Also Read  ಪಂಪ್ ಹಾಕಲು ಹೋದ ಶಾಲಾ ಸಹಾಯಕಿಗೆ ಹಾವು ಕಡಿತ - ಸ್ಥಿತಿ ಗಂಭೀರ

error: Content is protected !!
Scroll to Top