ಭಾರತದ ರಾಯಭಾರಿಯಾಗಿ ಟ್ರಂಪ್‌ ಆಪ್ತ ಸೆರ್ಗಿಯೊ ಗೋರ್‌ ನೇಮಕ

(ನ್ಯೂಸ್‌ ಕಡಬ) newskadaba.com, ಆ.23:‌‌ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ಟ್ರಂಪ್ಅವರ ಆಪ್ತ ರಾಜಕೀಯ ಸಹಾಯಕ ಹಾಗೂ ಶ್ವೇತಭವನದ ಪ್ರಮುಖ ಅಧಿಕಾರಿಯಾಗಿ ಸೆರ್ಗಿಯೊ ಗೋರ್ಅವರನ್ನು ಅಮೇರಿಕಾದ ಭಾರತೀಯ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.

ಗೋರ್ಅವರನ್ನು ಭಾರತ ರಾಯಭಾರಿ ಮಾತ್ರವಲ್ಲದೇ ದಕ್ಷಿಣ ಹಾಗೂ ಮಧ್ಯ ಏಷ್ಯಾಕ್ಕೆ ವಿಶೇಷ ರಾಯಭಾರಿಯಾಗಿಯೂ ಟ್ರಂಪ್ನೇಮಿಸಿದ್ದಾರೆ.

ಬಗ್ಗೆ ತಮ್ಮ ಟ್ರೂತ್ಸೋಶಿಯಲ್ವೇದಿಕೆಯಲ್ಲಿ ಪೋಸ್ಟ್ಮಾಡಿರುವ ಟ್ರಂಪ್‌, ವಿಶ್ವದ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ನನ್ನ ಕಾರ್ಯಸೂಚಿಯನ್ನು ಜಾರಿಗೊಳಿಸಲು ಹಾಗೂ ಅಮೇರಿಕಾವನ್ನು ಮತ್ತೆ ಶ್ರೇಷ್ಠವನ್ನಾಗಿಸಲು ನಾನು ಸಂಪೂರ್ಣವಾಗಿ ವಿಶ್ವಾಸ ಇಡಬಹುದಾದ ವ್ಯಕ್ತಿ ಇರುವುದು ಅತ್ಯಗತ್ಯ. ಹಾಗಾಗಿ ಸೆರ್ಗಿಯೊ ಗೋರ್ಅವರನ್ನು ಭಾರತದ ರಾಯಭಾರಿಯಾಗಿ ನೇಮಿಸುತ್ತಿದ್ದೇನೆ. ಗೋರ್ಅವರನ್ನು ಭಾರತ ಗಣರಾಜ್ಯಕ್ಕೆ ನಮ್ಮ ಮುಂದಿನ ಅಮೇರಿಕಾದ ರಾಯಭಾರಿಯಾಗಿ ಬಡ್ತಿ ನೀಡುತ್ತಿದ್ದೇನೆ ಎಂದು ಘೋಷಣೆ ಮಾಡಲು ನನಗೆ ಸಂತೋಷವಾಗುತ್ತಿದೆ. ಗೋರ್ಅವರು ದಕ್ಷಿಣ ಹಾಗೂ ಮಧ್ಯ ಏಷ್ಯಾ ವ್ಯವಹಾರಗಳಿಗೆ ವಿಶೇಷ ರಾಯಭಾರಿಯಾಗಿಯೂ ಸೇವೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Scroll to Top