ಪುಣ್ಚಪ್ಪಾಡಿ: ಚಿನ್ನದ ಟೊಪ್ಪಿ ಕಲಿಕಾ ಕಾವ್ಯದ ಸಮಾರೋಪ

(ನ್ಯೂಸ್ ಕಡಬ) newskadaba.com  ಸವಣೂರು, ಎ.16. ಅನುಭವ, ಅವಕಾಶ, ಪ್ರೀತಿ, ಸಂತಸಗಳು ಕಲಿಕೆಯ ಆಧಾರ ಸ್ತಂಭಗಳು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ರಮೇಶ್ ಉಳಯ ಹೇಳಿದರು. ಅವರು ಪುತ್ತೂರಿನ ಪುಣ್ಚಪ್ಪಾಡಿ ಸರಕಾರಿ ಶಾಲೆಯಲ್ಲಿ ನಡೆದ ಚಿನ್ನದ ಟೊಪ್ಪಿ ಕಲಿಕಾ ಕಾವ್ಯದ ಸಮಾರೋಪ ಸಮಾರಂಭದಲ್ಲಿ ಮಾತನಾಡುತಿದ್ದರು. ಅನುಭವ ಜನ್ಯ ಕಲಿಕೆಯಲ್ಲಿ ಬೆಳೆಯಬೇಕಾದ ಮಕ್ಕಳು ಇಂದು ಅಮೂರ್ತ ಸನ್ನಿವೇಶ ರಹಿತ ಕಲಿಕಾ ವ್ಯವಸ್ಥೆಗೆ ಒಳಗಾಗಿರುವುದು ಮಕ್ಕಳ ದುರಂತವೆಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಲಾವಿದ ನಾಗರಾಜ ನಿಡ್ವಣ್ಣಾಯರು ಮಾತನಾಡಿ ಮಕ್ಕಳ ಕಲಿಕೆಗೆ ಪೂರಕ ವತಾವರಣ ನಿರ್ಮಾಣ ಮಾಡುವುದು ಪೋಷಕರ ಕರ್ತವ್ಯವಾಗಿದೆ ಎಂದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಚರಣ್ ಕುಮಾರ್ ಪುದು ಮಾತನಾಡಿ, ಮಕ್ಕಳ ಕಲಿಕೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಸಂಭ್ರಮಿಸುವ ದೊಡ್ಡ ಗುಣವನ್ನು ಪೋಷಕರು ಬೆಳೆಸಿಕೊಳ್ಳಬೇಕು ಎಂದರು. ಶಿಬಿರ ಸಂಚಾಲಕರಾದ ಪಿ.ಡಿ. ಗಂಗಾಧರ್ ರೈ ದೇವಸ್ಯರವರು ಸಂದರ್ಭೋಚಿತವಾಗಿ ಮಾತಾನಾಡಿದರು.

ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಮೋನಪ್ಪ ಗೌಡ ಕುಚ್ಚೆಜಾಲು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿ ದೀಪ್ತಿ ಸ್ವಾಗತಿಸಿದರು. ಪ್ರಣಮ್ಯ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮುಖ್ಯಗುರುಗಳಾದ ರಶ್ಮಿತಾ ನರಿಮೊಗರು ಶಿಬಿರಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದವಿತ್ತರು. ಪೋಷಕರಾದ ಯಮುನಾ ಮತ್ತು ಹಲವು ಮಕ್ಕಳು ಅನಿಸಿಕೆ ವ್ಯಕ್ತಪಡಿಸಿದರು. ಅತಿಥಿ ಶಿಕ್ಷಕರಾದ ಯತೀಶ್ ಕುಮಾರ್, ಹಾಗೂ ಪ್ರತಿಮಾ ಸಹಕರಿಸಿದರು. ಶಿಬಿರದಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ತಾರನಾಥ ಸವಣೂರು , ಜಗನ್ನಾಥ ಅರಿಯಡ್ಕ, ನಾಗರಾಜ ನಿಡ್ವಣ್ಣಾಯ , ಚರಣ್ ಕುಮಾರ್ ಪುದು, ರಮೇಶ್ ಉಳಯ, ಸ್ಮಿತಾಶ್ರೀ ಕೊಕ್ಕಡ, ಭಗವಂತ ಛಲವಾದಿ ಮಕ್ಕಳಿಗೆ ಹಾಡು, ಕ್ರಾಫ್ಟ್ ಚಿತ್ರಕಲೆ, ನಾಟಕ ಅಭಿನಯಗಳ ಮೂಲಕ ಮಕ್ಕಳನ್ನು ರಂಜಿಸಿದರು. ಕೊನೆಯಲ್ಲಿ ಮಕ್ಕಳ ಚಿತ್ರಕಲೆ, ಕ್ರಾಫ್ಟ್, ಹಾಡು, ನೃತ್ಯಗಳ ಪ್ರದರ್ಶನ ಸೇರಿದ ಪೋಷಕರನ್ನು ರಂಜಿಸಿತು.

 

error: Content is protected !!

Join the Group

Join WhatsApp Group