ಬೆಳಂದೂರು: ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ

(ನ್ಯೂಸ್ ಕಡಬ) newskadaba.com ಸವಣೂರು, ಎ.16. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು .ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೋ.ಪಧ್ಮನಾಭರವರು ವಿದ್ಯಾರ್ಥಿಗಳು ಜೀವನದಲ್ಲಿ ಸೇವಾ ಮನೋಭಾವ ಬೆಳಸಿಕೊಂಡು ರಾಷ್ಟ್ರ ನಿಮಾರ್ಣಕ್ಕೆ ಕೈ ಜೋಡಿಸಬೇಕಾಗಿ ಕರೆ ನೀಡಿದರು.

ರಾ.ಸೇ.ಯೋ.ಯ ಯೋಜನಾಧಿಕಾರಿಗಳಾದ ಪ್ರೋ.ವೆಂಕಟೇಶ್ ಪ್ರಸನ್ನ ರವರು ಯೋಜನೆ ಪ್ರಾರಂಭದಿಂದ ಇಲ್ಲಿವರೆಗಿನ ಚಟುವಟಿಕೆಗಳನ್ನು ಪುನರ್ ನಮನ ಮಾಡಿಕೊಳ್ಳುತ್ತಾ 2ವಿಶೇಷ ಶಿಬಿರದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳನ್ನು ಸ್ಮರಿಸಿದರು. ವೇದಿಕೆಯಲ್ಲಿ ಎಲ್ಲಾ ಉಪನ್ಯಾಸಕರು ಮತ್ತು ರಾ.ಸೇ.ಯೋ. ಘಟಕದ ನಾಯಕ ಹರ್ಷಿತ್ ಮತ್ತು ನಾಯಕಿ ಕು.ಕುಸುಮಾ ಹಾಜರಿದ್ದರು. ಕಾರ್ಯಕ್ರಮದಲ್ಲಿ ಕು.ಕುಸುಮ ಸ್ವಾಗತಿಸಿ, ಹರ್ಷಿತ್ ವಂದಿಸಿದರು. ಕು.ಮಧು ನಿರೂಪಿಸಿದರು.

Also Read  ಕದ್ರಿ ಉದ್ಯಾನವನದ ಸಂಗೀತ ಕಾರಂಜಿ, ಲೇಸರ್ ಶೋ ದರ ಪರಿಷ್ಕರಣೆ ► ಅ.15ರಿಂದ ಹೊಸ ದರ ಚಾಲ್ತಿಗೆ

error: Content is protected !!
Scroll to Top