(ನ್ಯೂಸ್ ಕಡಬ) newskadaba.com ಸವಣೂರು, ಎ.16. ಸಂವಿಧಾನ ಶಿಲ್ಪಿ ಡಾ.ಭೀಮರಾವ್ ರಾಮ್ ಜೀ ಅಂಬೇಡ್ಕರ್ ರವರ 127 ನೇ ಜನ್ಮದಿನಾಚರಣೆಯನ್ನು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕಮಂಡಲದ ಆಶ್ರಯದಲ್ಲಿ ಆಚರಿಸಲಾಯಿತು.
ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಮಾತನಾಡಿದ ಪುತ್ತೂರು ತಾ.ಪಂ.ಮಾಜಿ ಉಪಾಧ್ಯಕ್ಷ ಬಾಬು ಮಾದೋಡಿ, ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ರಚಿಸಿಕೊಟ್ಟ ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಯುವಕ ಮಂಡಲ ಆಚರಿಸಿರುವುದು ಶ್ಲಾಘನೀಯ. ಅವರ ತತ್ವ, ಸಿದ್ಧಾಂತಗಳಂತೆ ಸರಕಾರಿ ಸೌಲಭ್ಯಗಳು ಶೋಷಿತ ವರ್ಗದ ಎಲ್ಲಾ ಜನರಿಗೆ ತಲುಪುವಂತಾಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಅಧ್ಯಕ್ಷ ಪರಮೇಶ್ವರ ಅನಿಲ, ಏಳಡ್ಕ ಶೀರಾಡಿ ರಾಜನ್ ದೈವಸ್ಥಾನದ ಅಧ್ಯಕ್ಷ ಮಾಧವ ಕಟ್ಟತ್ತಾರು, ಗ್ರಾಮಾಭಿವೃದ್ಧಿ ಯೋಜನೆಯ ಕಾಣಿಯೂರು ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡ ಮುಗರಂಜ, ಲಕ್ಷ್ಮೀನರಸಿಂಹ ಸಾಂಸ್ಕೃತಿಕ ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಮುಗರಂಜ, ಕೃ.ಪ.ಸಹಕಾರಿ ಸಂಘದ ನಿರ್ದೇಶಕ ಪದ್ಮಯ್ಯ ಅನಿಲ, ಕಣ್ವರ್ಷಿ ಅಟೋಚಾಲಕ-ಮಾಲಕ ಸಂಘದ ಅಧ್ಯಕ್ಷ ರಚನ್ ಬರಮೇಲು ಉಪಸ್ಥಿತರಿದ್ದರು ಯುವಕ ಮಂಡಲದ ಅಧ್ಯಕ್ಷ ದಿನೇಶ್ ಮುಗರಂಜ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೀರ್ತಿಕುಮಾರ್ ಎಲುವೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಓಡಬಾಯಿ ವಂದಿಸಿದರು.