ಮೂಸಂಬಿ ಜ್ಯೂಸ್‌ ಕುಡಿದರೆ ಯಾವೆಲ್ಲಾ ಪ್ರಯೋಜನ ಸಿಗುತ್ತೆ ಗೊತ್ತಾ..?



(ನ್ಯೂಸ್‌ ಕಡಬ) newskadaba.com, ಆ.17:‌ ಮೂಸಂಬಿ ಹಣ್ಣು ಯಾವುದೇ ಋತುಮಾನದಲ್ಲಿ ಸೇವನೆ ಮಾಡಬಹುದಾದ ಹಣ್ಣಾಗಿದ್ದು, ಇದು ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ವಿಟಮಿನ್ಸಿ, ರಂಜಕ ಹಾಗೂ ಪೊಟ್ಯಾಸಿಯಂ ಸಮೃದ್ದವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.





ಮೂಸಂಬಿ ಹಣ್ಣಿನ ರಸವನ್ನು ತಪ್ಪದೇ ಪ್ರತಿನಿತ್ಯ ಸೇವನೆ ಮಾಡುವುದರಿಂದ ನಿಮ್ಮ ದೇಹವನ್ನು ಹಾನಿಕಾರಕ ಸೋಂಕುಗಳಿಂದ ರಕ್ಷಿಸಿಕೊಳ್ಳಬಹುದು. ಬೆಳಗ್ಗಿನ ಸಮಯದಲ್ಲಿ ಇದನ್ನು ಸೇವನೆ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.






ನಿಯಮಿತವಾಗಿ ಮೂಸಂಬಿ ಹಣ್ಣಿನ ಜ್ಯೂಸ್ಸೇವನೆ ಮಾಡುವುದರಿಂದ ಅಜೀರ್ಣ, ಕರುಳಿನ ಚಲನೆ ಹಾಗೂ ಮಲಬದ್ದತೆಯಂತ ಸಮಸ್ಯೆಗಳು ಕಡಿಮೆಯಾಗುತ್ತವೆ.

ಮೂಸಂಬಿ ಹಣ್ಣಿನ ಜ್ಯೂಸ್ನಮ್ಮ ದೇಹದಿಂದ ವಿಷವನ್ನು ಹೊರಹಾಕಲು ನೆರವಾಗುತ್ತದೆ. ಅಲ್ಲದೇ, ಅತಿಸಾರ, ವಾಂತಿ ಹಾಗೂ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೂಸಂಬಿ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಹಾಗೂ ಶಿಲೀಂಧ್ರ ವಿರೋಧಿ ಗುಣಲಕ್ಷಣಗಳು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ.

ಮೂಸಂಬಿ ಜ್ಯೂಸ್ಸೇವೆನೆಯು ಚರ್ಮದ ಹಾನಿಯನ್ನು ತಡೆಯುತ್ತದೆ. ಅಲ್ಲದೇ, ಚರ್ಮದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

ಮೂಸಂಬಿ ರಸದಲ್ಲಿರುವ ಪೊಟ್ಯಾಸಿಯಂ ಅಂಶ ರಕ್ತದೊತ್ತಡವನ್ನು ನಿಯಂತ್ರಣ ಮಾಡುತ್ತದೆ ಹಾಗೂ ಅಧಿಕ ರಕ್ತದೊತ್ತಡ ಅಪಾಯವನ್ನು ಕಡಿಮೆ ಮಾಡುತ್ತದೆ.

error: Content is protected !!
Scroll to Top