‘ಧರ್ಮಸ್ಥಳ ಪ್ರಕರಣವನ್ನ ರಾಜಕೀಯಕ್ಕೆ ಬಳಕೆ ಮಾಡಲು ಅವಕಾಶ ನೀಡುವುದಿಲ್ಲ’- ಹೆಚ್.ಕೆ.ಪಾಟೀಲ್



(ನ್ಯೂಸ್‌ ಕಡಬ) newskadaba.com, ಆ.15 ಬೆಂಗಳೂರು:  ಧರ್ಮಸ್ಥಳ ಪ್ರಕರಣವನ್ನು ರಾಜಕೀಯಕ್ಕೆ ಬಳಕೆ ಮಾಡಲು ಸಾಧ್ಯನಾ ಅಂತ ನೋಡಲು ಪ್ರಯತ್ನ ಮಾಡ್ತಿದ್ದಾರೆ. ಅಂತವರಿಗೆ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.







ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾತನಾಡಿದ ಅವರು, “ಧರ್ಮಸ್ಥಳದ ವಿಷಯ ವಿಧಾನಸಭೆ ಒಳಗೆ ಚರ್ಚೆಗೆ ಬಂದಿದೆ. ಗೃಹ ಸಚಿವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅನಾಮಿಕ ವ್ಯಕ್ತಿ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ಹೇಳಿಕೆ ನೀಡಿದ್ದ. ಅದರ ಬಗ್ಗೆ ನ್ಯಾಯಯುತವಾಗಿ ತನಿಖೆ ನಡೆಯಬೇಕಾಗಿತ್ತು. ಆ ತನಿಖೆ ನಡೆದಿದೆ. ತನಿಖೆಯು ಯಾವ ಹಂತದಲ್ಲಿದೆ ಎಂಬ ಕೆಲವು ಭಾಗ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಈ ಬಗ್ಗೆ ಬಹುಶಃ ಸೋಮವಾರ ಇನ್ನು ಹೆಚ್ಚಿನ ಮಾಹಿತಿಯನ್ನು ಗೃಹ ಸಚಿವರು ನೀಡುತ್ತಾರೆ” ಎಂದು ಹೇಳಿದರು.






error: Content is protected !!
Scroll to Top