(ನ್ಯೂಸ್ ಕಡಬ) newskadaba.com, ಆ.15: ಕಪ್ಪು ಒಣದ್ರಾಕ್ಷಿ ಅನೇಕ ಗುಣಗಳಿಂದ ಸಮೃದ್ದವಾಗಿದೆ. ಇದು ಕ್ಯಾಲ್ಸಿಯಂ, ಪೊಟ್ಯಾಶಿಯಂ, ಕಬ್ಬಿಣ ಹಾಗೂ ಮೆಗ್ನಿಶಿಯಂಗಳನ್ನು ಹೊಂದಿದೆ. ಕಪ್ಪು ಒಣದ್ರಾಕ್ಷಿಯನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಕಪ್ಪು ದ್ರಾಕ್ಷಿ ಸೇವನೆ ಚರ್ಮಕ್ಕೆ ಉತ್ತಮವಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಚರ್ಮದ ಸೋಂಕನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಚರ್ಮದ ಸಮಸ್ಯೆ ಇರುವವರು ಒಣ ಕಪ್ಪುದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಕುಡಿಯಿರಿ.
ಕಪ್ಪು ದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ, ಮೆಗ್ನಿಶಿಯಂನಂತ ಅಂಶಗಳು ಉತ್ತಮವಾಗಿದ್ದು, ಇದು ಮೂಳೆಗಳನ್ನು ಬಲಪಡಿಸಲು ನೆರವಾಗಿದೆ. ಮೂಳೆಗಳ ಸಮಸ್ಯೆ ಇರುವವರು ಇದನ್ನು ಸೇವಿಸಿದರೆ ಉತ್ತಮ.
ಒಣ ಕಪ್ಪುದ್ರಾಕ್ಷಿ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಪ್ರಯೋಜನಕಾರಿಯಾಗಿದೆ. ಹಾಗಾಗಿ ಒಣ ಕಪ್ಪುದ್ರಾಕ್ಷಿಯನ್ನು ಹಾಲಿನಲ್ಲಿ ನೆನೆಸಿ ತಿಂದರೆ ಉತ್ತಮ.












