ಪಂಜಿಕಲ್ಲು ಪದವು: ಜುಗಾರಿ ಅಡ್ಡೆಗೆ ದಾಳಿ ► ಎಂಟು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.14. ಅಕ್ರಮ ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದು, 5060 ರೂಪಾಯಿ, ಎರಡು ಸ್ಕೂಟರ್ ಹಾಗೂ ಐದು ಮೊಬೈಲ್ ಗಳನ್ನು ವಶಪಡಿಸಿಕೊಂಡ ಘಟನೆ ಠಾಣಾ ವ್ಯಾಪ್ತಿಯ ಪಂಜಿಕಲ್ಲುಪದವು ಎಂಬಲ್ಲಿ ಶುಕ್ರವಾರದಂದು ನಡೆದಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿಯ ಪಂಜಿಕಲ್ಲುಪದವಿನ ಮಬ್ಬರಿಯ ಬೈಲು ಎಂಬಲ್ಲಿ ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಎಸ್ಪಿ ಡಾ.ರವಿಕಾಂತೇಗೌಡರವರ ನಿರ್ದೆಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಜುಗಾರಿ ಆಡುತ್ತಿದ್ದ ಎಂಟು ಮಂದಿಯನ್ನು ಬಂಧಿಸಿ, ಸುಮಾರು 41560 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಶಿವಾಜಿನಗರದಲ್ಲಿ ಕೆಂಪು ಕಲ್ಲು ಹಾಸಿ ರಸ್ತೆ ದುರಸ್ತಿ

error: Content is protected !!
Scroll to Top