(ನ್ಯೂಸ್ ಕಡಬ) newskadaba.com, ಆ.08: ಸಿಹಿತಿಂಡಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಆದರೆ, ಕೆಲವರು ಮಾತ್ರ ಬೆಳಗ್ಗೆ ಎದ್ದ ಕೂಡಲೇ ಬೇರೆ ಯಾವ ಆಹಾರವನ್ನು ಸೇವಿಸದೇ ಸಿಹಿತಿಂಡಿ ಅಥವಾ ಚಾಕೋಲೇಟ್, ಬಿಸ್ಕತ್ತುಗಳನ್ನು ತಿನ್ನುತ್ತಾರೆ. ಈ ರೀತಿಯಾದ ಅಭ್ಯಾಸ ನಿಮಗಿದ್ದಲ್ಲಿ ಇಂದೇ ಬಿಟ್ಟುಬಿಡಿ. ಏಕೆಂದರೆ, ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಬೆಳಗ್ಗೆ ಎದ್ದ ಕೂಡಲೇ ಸಿಹಿತಿಂಡಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿ ತಿನ್ನುವುದರಿಂದ ಟೈಪ್2 ಮಧುಮೇಹ ಬರಬಹುದು. ಇದು ಇನ್ಸುಲಿನ್ ಹಾರ್ಮೋನ್ ಹೆಚ್ಚಿನ ಬಿಡುಗಡೆಗೆ ಕಾರಣವಾಗುತ್ತದೆ. ಅಲ್ಲದೆ, ಇದು ಕಾಲಕ್ರಮೇಣ ದೇಹದ ಮೇಲೆ ಬಹಳಷ್ಟು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಅಲ್ಲದೇ, ರಕ್ತದಲ್ಲಿನ ಸಕ್ಕರೆ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿ ಸೇವಿಸುವುದನ್ನು ತಪ್ಪಿಸಿ.












