ಕಾಂತಾರ ಚಾಪ್ಟರ್‌ 1: ಕನಕವತಿ ಪೋಸ್ಟರ್‌ ರಿಲೀಸ್

(ನ್ಯೂಸ್‌ ಕಡಬ) newskadaba.com, ಆ.08:‌ ಕಾಂತಾರ ಚಿತ್ರದ ಪ್ರೀಕ್ವೆಲ್‌ ಆಗಿರುವ ಕಾಂತಾರ: ಚಾಪ್ಟರ್‌ 1 ಚಿತ್ರದ ನಾಯಕಿಯಾಗಿ ರುಕ್ಮಿಣಿ ವಸಂತ್‌ ಅಭಿನಯಿಸುತ್ತಿದ್ದಾರೆ.‌ ವರಮಹಾಲಕ್ಷ್ಮೀ ಹಬ್ಬದ ಈ ಶುಭದಿನದಂದು ಅವರ ಪಾತ್ರದ ಪೋಸ್ಟರ್‌ ಬಿಡುಗಡೆಯಾಗಿದೆ. ಇದರಿಂದ ಅಭಿಮಾನಿಗಳಲ್ಲಿ ರುಕ್ಮಿಣಿ ವಸಂತ್‌ ಅವರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದೆ.

ಕಾಂತಾರ: ಚಾಪ್ಟರ್‌1 ಚಿತ್ರದಲ್ಲಿ ರುಕ್ಮಿಣಿ ವಸಂತ್‌ ಕನಕವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್‌ ಅವರು ಯುವರಾಣಿ ರೀತಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನ ಹಿಂಭಾಗ ನೋಡಿದರೆ ರಾಜರ ಆಸ್ಥಾನದ ರೀತಿ ಕಾಣಿಸುತ್ತದೆ.

ಕಾಂತಾರ: ಚಾಪ್ಟರ್‌ 1 ಚಿತ್ರಕ್ಕೆ ಅರವಿಂದ್‌ ಎಸ್‌ ಕಶ್ಯಪ್‌ ಅವರ ಛಾಯಾಗ್ರಹಣ, ಬಿ. ಅಜನೀಶ್‌ ಲೋಕನಾಥ್‌ ಅವರ ಸಂಗೀತ ಸಂಯೋಜನೆ ಇದೆ. ಹೊಂಬಾಳೆ ಫಿಲ್ಮ್ಸ್‌ ಅಡಿಯಲ್ಲಿ ವಿಜಯ್‌ ಕಿರಂಗದೂರು ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಅವರು ನಟಿಸುವುದರೊಂದಿಗೆ ನಿರ್ದೇಶನ ಕೂಡ ಮಾಡಿದ್ದಾರೆ.

ಅ.2ರಂದು ಈ ಸಿನಿಮಾ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

Scroll to Top