ಬೆಳಗ್ಗೆ ಎದ್ದು ಎಬಿಸಿ ಜ್ಯೂಸ್‌ ಕುಡಿಯೋ ಅಭ್ಯಾಸ ಮಾಡಿಕೊಳ್ಳಿ…



(ನ್ಯೂಸ್‌ ಕಡಬ) newskadaba.com, ಆ.07:‌ ಎಬಿಸಿ ಜ್ಯೂಸ್ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ. ಇದನ್ನು ಬೀಟ್ರೂಟ್‌, ಸೇಬು ಹಾಗೂ ಕ್ಯಾರೆಟ್ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಪ್ರತಿದಿನ ಇದನ್ನು ಕುಡಿಯುವುದರಿಂದ ದೇಹಕ್ಕೆ ವಿವಿಧ ರೀತಿಯ ಪೋಷಕಾಂಶಗಳು ದೊರೆಯುತ್ತವೆ. ಹಾಗಾಗಿ ಆರೋಗ್ಯ ತಜ್ಞರು ನಿಮ್ಮ ಆಹಾರದಲ್ಲಿ ಎಬಿಸಿ ಜ್ಯೂಸ್ನ್ನು ಶಿಫಾರಸು ಮಾಡುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಎಬಿಸಿ ಜ್ಯೂಸ್ಕುಡಿಯುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎನ್ನುವ ಮಾಹಿತಿ ಇಲ್ಲಿದೆ.





ಬೀಟ್ರೂಟ್ಹಾಗೂ ಸೇಬು ಹಣ್ಣಿನಲ್ಲಿ ವಿಟಮಿನ್ಸಿ ಹಾಗೂ ಕ್ಯಾರೆಟ್ನಲ್ಲಿರುವ ಬೀಟಾಕ್ಯಾರೋಟಿನ್ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಸೋಂಕು ಹಾಗೂ ಅನಾರೋಗ್ಯದ ವಿರುದ್ದ ಹೋರಾಡಲು ಎಬಿಸಿ ಜ್ಯೂಸ್ಸಹಕಾರಿಯಾಗಿದೆ.






ನಿಮ್ಮ ಆಹಾರದಲ್ಲಿ ಎಬಿಸಿ ಜ್ಯೂಸ್ನ್ನು ಸೇರಿಸುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಇದು ಮಲಬದ್ದತೆಯನ್ನು ತಡೆಯಲು ನೆರವಾಗುತ್ತದೆ.

ಎಬಿಸಿ ಜ್ಯೂಸ್ನಲ್ಲಿರುವ ಉತ್ಕರ್ಷಣ ನಿರೋಧಕಗಳು ಹಾಗೂ ವಿಮಟಿನ್ ಹಾಗೂ ಸಿ ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಇದು ಚರ್ಮದ ಹೊಳಪನ್ನು ಹೆಚ್ಚಿಸಲು ಹಾಗೂ ಸುಕ್ಕು, ಮೊಡವೆಗಳನ್ನು ಕಡಿಮೆ ಮಾಡಿ ಚರ್ಮವನ್ನು ಕಾಂತಿಯುತವಾಗಿರಿಸುತ್ತದೆ.

ಎಬಿಸಿ ಜ್ಯೂಸ್ಕುಡಿಯುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ಇರುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ.

error: Content is protected !!
Scroll to Top