ಕಡಬ: ಮನೆಯ ಪರಿಸರ ಸ್ವಚ್ಛತೆಗೆ ಹಾಕಿದ ಬೆಂಕಿಗೆ ಹುಣಸೆ ಮರ ಆಹುತಿ ► ಅಗ್ನಿಶಾಮಕ ದಳದವರ ಆಗಮನದಿಂದ ತಪ್ಪಿತು ಸಂಭಾವ್ಯ ಅನಾಹುತ

(ನ್ಯೂಸ್ ಕಡಬ) newskadaba.com ಕಡಬ, ಎ.13. ಮನೆಯ ಪಕ್ಕದಲ್ಲಿ ಕಾಡುಹುಲ್ಲುಗಳು ಬೆಳೆದಿರುವುದನ್ನು ಉರಿಸಲೆಂದು ಹಾಕಿದ ಬೆಂಕಿಯು ಮರಕ್ಕೆ ಹಿಡಿದಿದ್ದು, ಬಳಿಕ ಪುತ್ತೂರು ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದ ಘಟನೆ ಶುಕ್ರವಾರದಂದು ಬೆಳಿಗ್ಗೆ ನಡೆದಿದೆ.

ಎರಡು ದಿನಗಳ ಹಿಂದೆ ಪರಿಸರವನ್ನು ಸ್ವಚ್ಚಗೊಳಿಸಲೆಂದು ಹಾಕಿದ ಬೆಂಕಿಯು ಹುಣಸೆ ಮರಕ್ಕೆ ಹಿಡಿದಿದ್ದು, ಆ ಬಳಿಕ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದ್ದರು. ಆದರೆ ಶುಕ್ರವಾರದಂದು ಬೆಳಿಗ್ಗೆ ಮರದಲ್ಲಿ ಬೆಂಕಿ‌ ಕಾಣಿಸಿಕೊಂಡಿದ್ದು, ಬಳಿಕ ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಎರಡನೇ ಬಾರಿಗೆ ಕಡಬಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಮರ ಟೊಳ್ಳಾಗಿರುವುದರಿಂದ ಬೆಂಕಿ ಹಿಡಿದಿರುವುದು ಮೇಲ್ನೋಟಕ್ಕೆ ಕಂಡು ಬಂದಿರಲಿಲ್ಲ. ಶುಕ್ರವಾರ ಬೆಳಿಗ್ಗೆ ಮನೆಯವರು ನೋಡಿದ್ದರಿಂದಾಗಿ ಸಂಭಾವ್ಯ ಅಪಾಯ ತಪ್ಪಿದೆ.

Also Read  ಮಂಗಳೂರು ವಿ.ವಿ 38ನೇ ವಾರ್ಷಿಕ ಘಟಿಕೋತ್ಸವ

error: Content is protected !!
Scroll to Top