ಕ್ಯಾನ್ಸರ್‌ ತಡೆಗಟ್ಟಲು ಸಹಕಾರಿ ಈ ಜ್ಯೂಸ್



(ನ್ಯೂಸ್‌ ಕಡಬ) newskadaba.com, ಆ.05: ಗರಿಗೆ ಹುಲ್ಲು ದೇವರ ಪೂಜೆಗೆ ಮಾತ್ರವಲ್ಲಿ ಆರೋಗ್ಯಕ್ಕೂ ಪ್ರಯೋಜನಕಾರಿ. ಗರಿಕೆ ಹುಲ್ಲಿನ ರಸ, ಜ್ಯೂಸ್ಅಥವಾ ಕಷಾಯ ಸೇವನೆ ಮಾಡುವುದು ದೇಹಕ್ಕೆ ಒಳ್ಳೆಯದು. ಆಯುರ್ವೇದದಲ್ಲಿ ಗರಿಕೆ ಹುಲ್ಲನ್ನು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಬಳಕೆ ಮಾಡಲಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಇದು ಜ್ವರದಂತಹ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಿದೆ.





ಗರಿಕೆ ಹುಲ್ಲಿನ ರಸ ಅಥವಾ ಕಷಾಯವನ್ನು ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಸೇವನೆ ಮಾಡಿದರೆ ಬಹಳ ಒಳ್ಳೆಯದು ಎನ್ನ್ನುತ್ತಾರೆ ಆಯುರ್ವೇದ ವೈದ್ಯರು. ನಿಯಮಿತವಾಗಿ ಜ್ಯೂಸ್ಸೇವನೆ ಮಾಡುವುದರಿಂದ ದೇಹದಲ್ಲಿನ ಕ್ಯಾನ್ಸರ್ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೇ, ರಕ್ತ ಶುದ್ದೀಕರಣಕ್ಕೂ ನೆರವಾಗುತ್ತದೆ.






ಗರಿಕೆ ಹುಲ್ಲಿನಲ್ಲಿ ವಿಟಮಿನ್, ಕೆ, ಸಿ ಹಾಗೂ ವಿಟಮಿನ್ಇಗಳು ಸಮೃದ್ದವಾಗಿದ್ದು, ಇದು ರಕ್ತವನ್ನು ಶುದ್ದೀಕರಿಸುತ್ತದೆ. ಇದರೊಂದಿಗೆ ರಕ್ತದೊತ್ತಡ, ರಕ್ತಹೀನತೆ ಹಾಗೂ ರಕ್ತ ಸಂಬಂಧಿತ ಕಾಯಿಲೆಗಳನ್ನು ವಾಸಿಮಾಡಲು ಸಹಕಾರಿಯಾಗಿದೆ.

error: Content is protected !!
Scroll to Top