ಆರೋಗ್ಯಕ್ಕೆ ಒಳ್ಳೆಯದು ಚಿಯಾ ಬೀಜ



(ನ್ಯೂಸ್‌ ಕಡಬ) newskadaba.com, ಆ.04: ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಅಥವಾ ಹಣ್ಣಿನ ಜ್ಯೂಸ್‌ಗಳಲ್ಲಿ ಬೆರೆಸಿ ಪ್ರತಿದಿನ ಸೇವನೆ ಮಾಡಿದರೆ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎದು ಆರೋಗ್ಯ ತಜ್ಞರು ಹೇಳುತ್ತಾರೆ.





ಚಿಯಾ ಬೀಜಗಳು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಅಲ್ಲದೇ, ಚಿಯಾ ಬೀಜಗಳನ್ನು ನೆನೆಸಿದ ನೀರು ಕುಡಿಯುವುದರಿಂದ ಕರುಳನ್ನು ಸ್ವಚ್ಛಗೊಳಿಸಬಹುದು. ಹಾಗಾಗಿ ನಿಮ್ಮ ಕರುಳು ಆರೋಗ್ಯವಾಗಿರಬೇಕು ಎಂದರೆ ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಚಿಯಾ ಬೀಜಗಳನ್ನು ಸೇವನೆ ಮಾಡಬೇಕು.






ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಚಿಯಾ ಬೀಜಗಳನ್ನು ಸೇವಿಸುವುದು ಉತ್ತಮ. ಚಿಯಾ ಬೀಜಗಳನ್ನು ಮಿಲ್ಕ್ಶೇಕ್ಗಳಲ್ಲಿ ಸೇರಿಸಿ ಕುಡಿಯಬಹುದು. ಇದರಿಂದ ನಿಮ್ಮ ತೂಕವನ್ನು ಆರೋಗ್ಯಕರವಾಗಿ ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೇ, ಪ್ರತಿನಿತ್ಯ ಚಿಯಾ ಬೀಜಗಳನ್ನು ಸೇವಿಸುವುದರಿಂದ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

ಚಿಯಾ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ನ್ನು ಹೆಚ್ಚಿಸಿಕೊಳ್ಳಬಹುದು. ಅಲ್ಲದೇ, ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡಲು ನೆರವಾಗಿದೆ. ಚಿಯಾ ಬೀಜಗಳ ಸೇವನೆಯು ಹೃದಯದ ಆರೋಗ್ಯಕ್ಕೂ ಒಳ್ಳೆಯದು.

error: Content is protected !!
Scroll to Top