ನಾಪತ್ತೆಯಾಗಿದ್ದ ಬೆಳ್ಳಾರೆಯ ಶಿಕ್ಷಕಿ ಮದುವೆಯಾಗಿ ಪತ್ತೆ

(ನ್ಯೂಸ್ ಕಡಬ) newskadaba.com ಸುಳ್ಯ, ಎ.12. ವಾರದ ಹಿಂದೆ ನಾಪತ್ತೆಯಾಗಿದ್ದ ಬೆಳ್ಳಾರೆಯ ಖಾಸಗಿ ಶಾಲೆಯ ಸಹ ಶಿಕ್ಷಕಿಯೋರ್ವಳು ತನ್ನ ಪ್ರಿಯಕರನೊಂದಿಗೆ ಮದುವೆಯಾಗಿ ಬೆಳ್ಳಾರೆ ಠಾಣೆಗೆ ಹಾಜರಾಗಿದ್ದಾರೆ.

ಮಾರ್ಚ್ 31 ರಂದು ಮನೆಯಿಂದ ಶಾಲೆಗೆಂದು ತೆರಳಿದ್ದ ಶಿಕ್ಷಕಿ ಮನೆಗೆ ಹೋಗದೆ ಇವರು ಸಹೋದರ ಸಂಬಂಧಿಯೊಂದಿಗೆ ನಾಪತ್ತೆಯಾಗಿದ್ದಳೆನ್ನಲಾಗಿದೆ. ನಂತರ ಬೆಳ್ತಂಗಡಿಯ ದೇವಸ್ಥಾನವೊಂದರಲ್ಲಿ ಮದುವೆಯಾಗಿ ನೋಂದಣಿ ಕಛೇರಿಯಲ್ಲಿ ನೋಂದಾಯಿಸಿಕೊಂಡು ಬೆಳ್ಳಾರೆ ಠಾಣೆಗೆ ಹಾಜರಾಗಿದ್ದಾರೆ‌. ಬೆಳ್ಳಾರೆ ಪೊಲೀಸರು ಶಿಕ್ಷಕಿಯ ಹೆತ್ತವರನ್ನು ಠಾಣೆಗೆ ಕರೆಸಿದ್ದು, ಹೆತ್ತವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

Also Read  ಮಂಗಳೂರು: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

error: Content is protected !!
Scroll to Top