(ನ್ಯೂಸ್ ಕಡಬ) newskadaba.com,ಜು .17. ಶಾಲೆಯಲ್ಲಿ ವಿದ್ಯುತ್ ಶಾಕ್ ತಗುಲಿದ ಪರಿಣಾಮ 13 ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಕೇರಳದ ಕೊಲ್ಲಂ ಜಿಲ್ಲೆಯ ತೆವಳಕ್ಕರ ಬಾಲಕರ ಶಾಲೆಯಲ್ಲಿ ಇಂದು ಬೆಳಗ್ಗೆ ಈ ಅವಘಡ ಸಂಭವಿಸಿದೆ. ಮೃತ ವಿದ್ಯಾರ್ಥಿ ಮಿಥುನ್, 8ನೇ ತರಗತಿಯಲ್ಲಿ ಓದುತ್ತಿದ್ದನು. ಶಾಲೆಯ ಪಕ್ಕದಲ್ಲಿ ಸೈಕಲ್ ನಿಲ್ಲಿಸಲು ಶೆಡ್ ವ್ಯವಸ್ಥೆ ಮಾಡಲಾಗಿದೆ. ಈ ಶೆಡ್ ಮೇಲೆ ಮಿಥುಲ್ ಚಪ್ಪಲಿ ಬಿದ್ದಿತ್ತು. ಈ ಚಪ್ಪಲಿ ತೆಗೆದುಕೊಳ್ಳಲು ಮಿಥುನ್ ಶೆಡ್ ಮೇಲೆ ಏರಿದ್ದನು.
ಈ ವೇಳೆ ತ್ರೀ ಫೇಸ್ ವಿದ್ಯುತ್ ತಂತಿ ತಗುಲಿದೆ. ಕೂಡಲೇ ಶಾಲಾ ಸಿಬ್ಬಂದಿ ಮತ್ತು ಸಹಪಾಠಿಗಳು ಮಿಥುನ್‌ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಇತ್ತ ಆಸ್ಪತ್ರೆ ಮುಂದೆ ಮಿಥುನ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಶಾಲೆಗೆ ರಜೆ ನೀಡಲಾಗಿದೆ ಎಂದು ವರದಿಯಾಗಿದೆ. ಆಸ್ಪತ್ರೆ ಆವರದಲ್ಲಿ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಸಹ ಸೇರಿದ್ದಾರೆ.












