ಎ.14 : ಪಾದೆಬಂಬಿಲದಲ್ಲಿ ವಾರ್ಷಿಕ ಭಜನೆ,ಸಾರ್ವಜನಿಕ ಶನೈಶ್ಚರ ಪೂಜೆ

(ನ್ಯೂಸ್ ಕಡಬ) newskadaba.com ಸವಣೂರು, ಎ.10. ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ದುರ್ಗಾ ಭಜನಾ ಮಂಡಳಿಯ 18ನೇ ವಾರ್ಷಿಕ ಭಜನಾ ಕಾರ್ಯಕ್ರಮ ಮತ್ತು ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಎ.14ರಂದು ಭಜನಾ ಮಂದಿರದ ವಠಾರದಲ್ಲಿ ನಡೆಯಲಿದೆ.

ಎ.14ರಂದು ಬೆಳಿಗ್ಗೆ 8ಕ್ಕೆ ಗಣಹೋಮ,ಸಂಜೆ 4ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಭಜನಾ ಕಾರ್ಯಕ್ರಮದಲ್ಲಿ ಹರಿಭಜನ ಮಂಡಳಿ ಹರಿನಗರ ದೇವಶ್ಯ ಪುಣ್ಚಪ್ಪಾಡಿ, ಚಾರ್ವಾಕ ಕಪಿಲೇಶ್ವರ ಭಜನಾ ಮಂಡಳಿ, ಪೆರುಯಡ್ಕ ಆದಿಶಕ್ತಿ ಭಜನಾ ಮಂಡಳಿ, ಕುಮಾರಮಂಗಲ ಅರ್ಪಿತಾ ಯುವತಿ ಮಂಡಲ, ನರಿಮೊಗರು ಪ್ರಖ್ಯಾತಿ ಯುವತಿ ಮಂಡಲ, ಕಾಣಿಯೂರು ಲಕ್ಷ್ಮಿ ನರಸಿಂಹ ಭಜನಾ ಮಂಡಳಿ ಪಾಲ್ಗೊಳ್ಳಲಿದೆ. ನಂತರ ಸಾರ್ವಜನಿಕ ಶನೈಶ್ಚರ ಪೂಜೆ ನಡೆಯಲಿದೆ. ರಾತ್ರಿ 8ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೈವದ ಮಧ್ಯಸ್ಥ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಧಾರ್ಮಿಕ ಉಪನ್ಯಾಸ ನೀಡುವರು. ಶ್ರೀ ಕ್ಷೇ.ಧ.ಗ್ರಾ.ಯೋ.ಸುಳ್ಯ ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ ಮುಗೇರು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶ್ರೀ ಕ್ಷೇ.ಧ.ಗ್ರಾ.ಯೋ.ಯ ಸವಣೂರು ಒಕ್ಕೂಟದ ಅಧ್ಯಕ್ಷ ವೆಂಕಪ್ಪ ಗೌಡ ಅಡೀಲು, ಸಾಮಾಜಿಕ ಮುಂದಾಳು ಬಿ.ಸುಬ್ರಾಯ ಗೌಡ ಮಾಡಾವು, ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಕುದ್ಮನಮಜಲು, ಸತೀಶ್ ಬಲ್ಯಾಯ, ಶಕ್ತಿನಗರ ದುರ್ಗಾ ಭಜನಾ ಮಂಡಳಿಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಪಾಲ್ಗೊಳ್ಳುವರು ಎಂದು ಭಜನಾ ಮಂದಿರದ ಅಧ್ಯಕ್ಷ ಹರೀಶ್ ಅಂಗಡಿಮೂಲೆ, ಕಾರ್ಯದರ್ಶಿ ಸುದರ್ಶನ್ ಬಿ.ಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ, ಕದಿರು ವಿನಿಯೋಗ, ತೆನೆ ವಿತರಣೆ

error: Content is protected !!
Scroll to Top