ಮುಕ್ವೆ ಮಜಲುಮಾರು ಉಮಾಮಹೇಶ್ವರ ದೇವಸ್ಥಾನದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ

(ನ್ಯೂಸ್ ಕಡಬ) newskadaba.com ನರಿಮೊಗರು ಎ.10. ಇಲ್ಲಿನ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಸುಮಾರು 24 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಡೆಯಿತು. ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಸುಬ್ರಹ್ಮಣ್ಯ ತಂತ್ರಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ: ಸಭೆಯಲ್ಲಿ ಬ್ರಹ್ಮವಾಹಕ ಹರೀಶ್ ಉಂಗ್ರುಪುಳಿತ್ತಾಯ ಮರೀಲು, ದೇವಸ್ಥಾನಕ್ಕೆ ಜಾಗ ದಾನ ಮಾಡಿದ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ತಿರುಮಲೇಶ್ವರ ಭಟ್ ಮಜಲುಮಾರು ಮತ್ತು ಯಮುನಾ ರೈ ಅಳಕೆ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಕೆಲಸವನ್ನು ನಿರ್ವಹಿಸಿದ ಗುತ್ತಿಗೆದಾರ ಪದ್ಮನಾಭ ಪೂಜಾರಿ, ಮೇಲ್ಛಾವಣಿಯನ್ನು ನಿರ್ಮಿಸಿದ ಭಾಗ್ಯೋದಯ ಇಂಡಸ್ಟ್ರೀಸ್‌ನ ಮ್ಹಾಲಕ ರವಿ ಮಣಿಯ, ನಾಗನ ಕಟ್ಟೆಗೆ ಹೋಗುವ ದಾರಿಗೆ ಕಾಲು ಸಂಕ ರಚಿಸಿದ ಗುತ್ತಿಗೆದಾರ ಮಂಜುನಾಥ ಶೇಖ ಹಾಗೂ ನಗರ ಭಜನೆಯನ್ನು ನಡೆಸಿದ ಭಜನಾ ತಂಡದವರನ್ನು ಗೌರವಿಸಲಾಯಿತು. ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯರವರು ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಅಕ್ಷಯ್ ಗ್ರೂಪ್‌ನ ಮ್ಹಾಲಕ ಜಯಂತ ನಡುಬೈಲು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿ ಗಿರೀಶ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಮಾ ಮಹೇಶ್ವರ ಸೇವಾ ಟ್ರಸ್ಟ್‌ನ ಗೌರವ ಸಲಹೆಗಾರ ಜಯರಾಮ ಕೆದಿಲಾಯ ಶಿಬರ, ಸದಸ್ಯ ಮೋನಪ್ಪ ಪುರುಷ ಹಾಗೂ ಲಕ್ಷ್ಮೀಶ ತಂತ್ರಿ ಉಪ್ಪಳ ಉಪಸ್ಥಿತರಿದ್ದರು. ಹಿತಾಶ್ರೀ ಮತ್ತು ವಿಭಾಶ್ರೀ ಪ್ರಾರ್ಥಿಸಿದರು. ಕೋಶಾಧಿಕಾರಿ ನವೀನ್ ರೈ ಶಿಬರ ಸ್ವಾಗತಿಸಿದರು. ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ತಿರುಮಲೇಶ್ವರ ಭಟ್ ಮತ್ತು ಅವರ ಪತ್ನಿ ಶ್ರೀದೇವಿಯವರು ಸ್ವಾಮೀಜಿಯವರಿಗೆ ಫಲಪುಷ್ಪ ಸಮರ್ಪಿಸಿದರು. ಟ್ರಸ್ಟ್‌ನ ಸದಸ್ಯರಾದ ಸುಧೀರ್ ಹೆಬ್ಬಾರ್, ಗಿರೀಶ್ ಮಣಿಯ, ರವಿ ಮಣಿಯ, ಕೇಶವ ಮಣಿಕಂಠ ಹಾಗೂ ನಿತ್ಯಾನಂದ ಆಚಾರ್ಯ ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಪ್ರವೀಣ್ ಕುಮಾರ್ ನಡುವಾಲ್ ವರದಿ ವಾಚಿಸಿದರು. ಟ್ರಸ್ಟ್‌ನ ಅಧ್ಯಕ್ಷ ತಿರುಮಲೇಶ್ವರ ಭಟ್ ವಂದಿಸಿದರು. ತಾ.ಪಂ.ಮಾಜಿ ಸದಸ್ಯ ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಪಾರ್ವತಿ ಸ್ವಯಂವರ ಪೂಜೆ, ನಗರ ಭಜನಾ ಮಂಗಲೋತ್ಸವ, ಅನ್ನಸಂತರ್ಪಣೆ ಹಾಗೂ ಯಕ್ಷಕೂಟ ಪುತ್ತೂರು ಇವರಿಂದ ಯಕ್ಷಗಾನ ಬಯಲಾಟ ನಡೆಯಿತು. ಸಾವಿರಾರು ಮಂದಿ ಪಾಲ್ಗೊಂಡಿದ್ದರು.
error: Content is protected !!
Scroll to Top