ಸವಣೂರು ಯುವ ಸಪ್ತಾಹದಲ್ಲಿ ಕ್ರಿಕೆಟ್ ಪಂದ್ಯಾಟ

(ನ್ಯೂಸ್ ಕಡಬ) newskadaba.com ಸವಣೂರು ಎ.9. ಕ್ರೀಡೆಯಿಂದ ಸೌಹಾರ್ದಯುತ ವಾತಾವರಣ ನಿರ್ಮಾಣ ಸಾದ್ಯ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯ. ಆಧುನಿಕ ಯುಗದಲ್ಲಿ ಅಂತರ್ಜಾಲದಲ್ಲೇ ಮುಳುಗಿರುವ ಯುವಜನತೆಯನ್ನು ಕ್ರೀಡೆಯತ್ತ ಸೆಳೆಯಲು ಪಂದ್ಯಕೂಟಗಳು ಅವಕಾಶ ಕಲ್ಪಿಸುತ್ತದೆ ಎಂದು ಸವಣೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಪ್ರಗತಿ ಪರ ಕೃಷಿಕ ಪಿ.ಡಿ.ಗಂಗಾಧರ ರೈ ದೇವಸ್ಯ ಹೇಳಿದರು.

ಅವರು ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಯುವಸಪ್ತಾಹದ ಅಂಗವಾಗಿ ನಡೆದ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಮುಖ್ಯಗುರು ಗಿರಿಶಂಕರ್ ಸುಲಾಯ, ಕರುಣಾಕರ ದೇವಸ್ಯ, ಉಮೇಶ್ ದೇವಸ್ಯ ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಯತೀಶ್ ಕುಮಾರ್ ಕೆ.ಎಂ ಸ್ವಾಗತಿಸಿ, ವಂದಿಸಿದರು.ಮಾಜಿ ಅಧ್ಯಕ್ಷ ಮೋಹನ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Also Read  ನ.18ರಂದು ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ ಮೃಣಾಲ್ ಪಾಂಡೆ ಕುರಿತ ಎರಡು ಕೃತಿಗಳ ಬಿಡುಗಡೆ

error: Content is protected !!
Scroll to Top