ಪಾರ್ಟ್ ಟೈಮ್ ಕೆಲಸದ ಹೆಸರಿನಲ್ಲಿ ವ್ಯಕ್ತಿಗೆ 6.50 ಲಕ್ಷ ರೂ.ವಂಚನೆ



(ನ್ಯೂಸ್ ಕಡಬ) newskadaba.com ಜು. 07. ಮನೆಯಿಂದಲೇ ಪಾರ್ಟ್ ಟೈಮ್ ಕೆಲಸ ಮಾಡಿ ಹಣ ಗಳಿಸಬಹುದು ಎನ್ನುವ ಜಾಹೀರಾತನ್ನು ನಂಬಿ 6.50 ರೂ. ಕಳೆದುಕೊಂಡಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





ವರದಿಯ ಪ್ರಕಾರ, ದುರುದಾರರಿಗೆ ಜೂನ್ 25ರಂದು ವಾಟ್ಸ್ ಅಪ್ ಮೂಲಕ ಪಾರ್ಟ್ ಟೈಮ್ ಕೆಲಸದ ಬಗ್ಗೆ ಸಂದೇಶ ಬಂದಿತ್ತೆನ್ನಲಾಗಿದೆ. ಅದರಲ್ಲಿದ್ದ ಲಿಂಕ್ ನ್ನು ಕ್ಲಿಕ್ ಮಾಡಿ, ಟೆಲಿಗ್ರಾಂ ಆಯಪ್ ಡೌನ್ ಲೋಡ್ ಮಾಡುವಂತೆ ತಿಳಿಸಲಾಗಿದೆ. ಅನಂತರ ಮತ್ತೆರಡು ಲಿಂಕ್ ಕಳುಹಿಸಿ, 20 ವರ್ಕ್ ಟಾಸ್ಕ್ ಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದ್ದರು. ಅದಕ್ಕೂ ಮೊದಲು ವರ್ಕಿಂಗ್ ಐಡಿ ನಂಬರ್ ಕೊಟ್ಟಿದ್ದು, ಅಕೌಂಟ್ ವಿವರಗಳನ್ನು ಪಡೆದಿದ್ದರು ಎನ್ನಲಾಗಿದೆ.






ಮೊದಲ ಟಾಸ್ಕ್ ಮುಗಿಸಿದಾಗ ಖಾತೆಗೆ 180 ರೂ. ಅನಂತರ 200 ರೂ. ಜಮೆಯಾಗಿದೆ. ಜೂನ್ 26ರಂದು ಟ್ರೇಡ್ ಟಾಸ್ಕ್ ನೀಡಿದ್ದು, ಈ ಟಾಸ್ಕ್ ಗೆ 800 ರೂ. ಪಾವತಿಸುವಂತೆ ತಿಳಿಸಿದ್ದಾರೆ. ಅದರಂತೆ ದುರುದಾರರು ಹಣ ಪಾವತಿಸಿದ್ದರು. ಬಳಿಕ ಅದೇ ರೀತಿ ಜು.28ರವರೆಗೆ ಹಂತಹಂತವಾಗಿ ಒಟ್ಟು 6,50,801 ರೂ. ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಹಣವನ್ನು ವಾಪಸ್ ಕೇಳಿದಾಗ ನೀಡದೇ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

error: Content is protected !!
Scroll to Top