ಸವಣೂರು: ಯುವ ಸಪ್ತಾಹದಲ್ಲಿ ಭಜನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com  ಸವಣೂರು ಎ.9. ಭಜನೆಯಿಂದ ವಿಭಜನೆ ತಪ್ಪುತ್ತದೆ. ದೇವರನ್ನೊಳಿಸಲು ಭಜನೆ ಸುಲಭ ಹಾದಿ ಎಂದು ಪಾಲ್ತಾಡಿ ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್ ಹೇಳಿದರು. ಅವರು ಸವಣೂರು ರೈಲ್ವೆಗೇಟ್ ಬಳಿಯ ಸಂತಸದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಯುವಸಪ್ತಾಹದ ಅಂಗವಾಗಿ ನಡೆದ 4 ನೇ ದಿನದ ಕಾರ್ಯಕ್ರಮ ಭಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಸಂದರ್ಭ ಕಾರ್ಯಕ್ರಮ ಆಯೋಜಕರಾದ ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಸುಗಂಧ, ಸುರೇಶ್ ರೈ, ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು, ಕಾರ್ಯದರ್ಶಿ ಗುರುಪ್ರಿಯಾ ನಾಯಕ್, ಸರ್ವೆ ಷಣ್ಮುಖ ಯುವಕ ಮಂಡಲದ ಜಯರಾಜ ಸುವರ್ಣ ಸೊರಕೆ, ಮಂಜುನಾಥನಗರ ವಿವೇಕಾನಂದ ಯುವಕ ಮಂಡಲದ ಮಲ್ಲಿಕಾರ್ಜುನ್ ಬೇಲೂರು ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ಯತೀಶ್ ಕುಮಾರ್ ಸ್ವಾಗತಿಸಿ, ಮಾಜಿ ಅಧ್ಯಕ್ಷ ಸಚಿನ್ ಭಂಡಾರಿ ವಂದಿಸಿದರು.ಕೋಶಾಧಿಕಾರಿ ಪ್ರವೀಣ್ ಚೆನ್ನಾವರ ಕಾರ್ಯಕ್ರಮ ನಿರೂಪಿಸಿದರು.

Also Read  ಎ.9: ಸವಣೂರು ಯುವಕ‌ ಮಂಡಲದ ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ

error: Content is protected !!
Scroll to Top