ಯುವತಿ ಆತ್ಮಹತ್ಯೆಗೆ ಯತ್ನ..!



(ನ್ಯೂಸ್ ಕಡಬ) newskadaba.com ಜು. 05. ಯುವತಿಯೋರ್ವರು ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿ, ಮರಕ್ಕೆ ಸಿಲುಕಿ ರಾತ್ರಿಯಿಡಿ ಒದ್ದಾಡಿರುವ ಘಟನೆ ಮಂಡ್ಯದಲ್ಲಿ ವರದಿಯಾಗಿದೆ.





 

ಆತ್ಮಹತ್ಯೆಗೆ ಯತ್ನಿಸಿದ ಯವತಿಯನ್ನು ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ನಿವಾಸಿ ಪವಿತ್ರ (19) ಎಂದು ಗುರುತಿಸಲಾಗಿದ್ದು, ನದಿಗೆ ಹಾರಿದ್ದ ಪವಿತ್ರ ಸುಮಾರು ಐದು ಕಿ.ಮೀ. ದೂರ ಪ್ರವಾಹದಲ್ಲಿ ಕೊಚ್ಚಿ ಹೋಗಿ ನದಿಯ ಮಧ್ಯೆಯಿದ್ದ ಮರವೊಂದಕ್ಕೆ ಸಿಕ್ಕಿಕೊಂಡಿದ್ದರು. ಇಡೀ ರಾತ್ರಿ‌ ಮರದ ಮೇಲೆ‌ ಕುಳಿತಿದ್ದರು ಎನ್ನಲಾಗಿದೆ.






 

 

ವಿಚಾರ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು, ಯುವತಿಯನ್ನು ರಕ್ಷಿಸಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಲು ನಿಖರ ಕಾರಣ ತಿಳಿದು ಬಂದಿಲ್ಲ.

 

 

 

error: Content is protected !!
Scroll to Top