ಸಿಟ್ಟಿನಿಂದ ಶೋಕೇಸ್ ಗಾಜು ಒಡೆದ ವ್ಯಕ್ತಿ ತೀವ್ರ ರಕ್ತಸ್ರಾವದಿಂದ ಮೃತ್ಯು..!



(ನ್ಯೂಸ್ ಕಡಬ) newskadaba.com ಜು. 04. ಕೋಪಗೊಂಡ ವ್ಯಕ್ತಿಯೋರ್ವ ಮನೆಯ ಶೋಕೇಸ್ ನ ಗಾಜನ್ನು ಕೈಯ್ಯಲ್ಲೇ ಒಡೆದ ಪರಿಣಾಮ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ಘಟನೆ ಮಾಡೂರು ಸೈಟ್ ನಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.





 

ಮೃತರನ್ನು ಮಾಡೂರ್ ಸೈಟ್ ನಿವಾಸಿ ಸತೀಶ್ ನಾಯಕ್ ರವರ ಪುತ್ರ ನಿತೇಶ್ ನಾಯಕ್‌(38) ಎಂದು ಗುರುತಿಸಲಾಗಿದೆ. ಮೃತ ನಿತೇಶ್ ಹಾಗೂ ಸಹೋದರ ಇಬ್ಬರೂ ತಿಂಡಿ ಲೈನ್ ಸೇಲ್ ನಡೆಸುತ್ತಿದ್ದರು.






ಗುರುವಾರದಂದು ಕರ್ತವ್ಯ ಮುಗಿಸಿ ಮನೆಗೆ ವಾಪಾಸ್ಸಾದ ಬಳಿಕ ಕೋಟೆಕಾರು ಬೀರಿ ಜಂಕ್ಷನ್ ಸಮೀಪ ತಂದೆ ಮತ್ತು ಸಹೋದರನ ಜೊತೆಗೆ ಗಲಾಟೆ ಮಾಡಿ ಬಂದಿದ್ದ ನಿತೇಶ್, ಮನೆಯಲ್ಲಿಯೂ ನಿತ್ಯದಂತೆ ಗಲಾಟೆ

ನಡೆಸಿದ್ದರು ಎನ್ನಲಾಗಿದೆ. ಈ ವೇಳೆ ಕೋಪದಿಂದ ಮನೆಯ ಶೋಕೇಸ್ ನ ಗಾಜನ್ನು ಒಡೆದಿದ್ದು, ಈ ವೇಳೆ ಕೈಯ ನರಕ್ಕೆ ಉಂಟಾದ ಗಾಯದಿಂದ ತೀವ್ರ ರಕ್ತಸ್ರಾವವುಂಟಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಮೃತರ ತಾಯಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top