ಹಾಲಿವುಡ್‌ನ ವಾಕ್ ಆಫ್ ಫೇಮ್ ಪಡೆದು ಇತಿಹಾಸ ಬರೆದ ಭಾರತದ ಮೊದಲ ನಟಿ ದೀಪಿಕಾ ಪಡುಕೋಣೆ



(ನ್ಯೂಸ್ ಕಡಬ) newskadaba.com ಜು. 04. ಹಾಲಿವುಡ್‌ನ ವಾಕ್ ಆಫ್ ಫೇಮ್‌ನಲ್ಲಿ ಸ್ಥಾನ ಪಡೆದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇತಿಹಾಸ ನಿರ್ಮಿಸಿದ್ದಲ್ಲದೇ ಹಾಲಿವುಡ್‌ನ ವಾಕ್ ಆಫ್ ಫೇಮ್ ಪಡೆದ ಮೊದಲ ಭಾರತೀಯ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.





 

ಅಮೆರಿಕದ ಲಾಸ್ ಏಂಜಲೀಸ್‌ ನ ಹಾಲಿವುಡ್ ಬೌಲೆವಾರ್ಡ್‌ ನಲ್ಲಿ ಹಾಲಿವುಡ್‌ ನ ವಾಕ್ ಆಫ್ ಫೇಮ್ ಇದ್ದು, ಇಲ್ಲಿ ನೆಲದ ಮೇಲೆ ಸ್ಟಾರ್ ರೀತಿ ಆಕೃತಿಯನ್ನು ನಿರ್ಮಿಸಿ ಅದರಲ್ಲಿ ನಟ-ನಟಿಯರ ಹೆಸರುಗಳನ್ನು ಬರೆದಿಡಲಾಗುತ್ತದೆ. ಇದನ್ನು ವಾಕ್ ಆಫ್ ಫೇಮ್ ಎಂದು ಹೇಳಲಾಗುತ್ತದೆ. ಇದೀಗ ಈ ರಸ್ತೆಯಲ್ಲಿ ನಟಿ ದೀಪಿಕಾ ಪಡುಕೋಣೆ ಹೆಸರು ಕೂಡ ನಕ್ಷತ್ರದಾಕೃತಿಯ ಒಳಗೆ ಸೇರಿಕೊಳ್ಳಲಿದೆ.






ಮೋಷನ್ ಪಿಕ್ಚರ್ ವಿಭಾಗದಲ್ಲಿ ದೀಪಿಕಾ ಪಡುಕೋಣೆ ಹೆಸರನ್ನು ವಾಕ್ ಆಫ್ ಫೇಮ್‌ಗೆ ಆಯ್ಕೆ ಮಾಡಲಾಗಿದೆ. 2026ನೇ ಸಾಲಿನಲ್ಲಿ ನಟಿಯ ಹೆಸರನ್ನು ನಮೂದಿಸಲಾಗುತ್ತದೆ. ಇನ್ನು ಈ ಗೌರವ ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ ನಟಿ ದೀಪಿಕಾ.

 

ದೀಪಿಕಾ ಪಡುಕೋಣೆ ಹೆಸರನ್ನು ನಕ್ಷತ್ರದಲ್ಲಿ ಮಾಡಿ ಅದನ್ನು ರಸ್ತೆಗೆ ಅಳವಡಿಸಲಾಗುತ್ತದೆ. ಇದಕ್ಕಾಗಿ ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್​ಗೆ ದೊಡ್ಡ ಮೊತ್ತದ ಹಣವನ್ನು ಕೂಡ ನೀಡಬೇಕಾಗಿದೆ. ಇನ್‌ ಸ್ಟಾಲೇಷನ್ ಮತ್ತು ಮೇಂಟೇನೆನ್ಸ್​ಗೆ 85 ಸಾವಿರ ಡಾಲರ್ ಅಂದರೆ ಸುಮಾರು 75 ಲಕ್ಷ ರೂಪಾಯಿಗಳನ್ನು ಯಾರು ನಾಮಿನೇಟ್ ಮಾಡಿರುತ್ತಾರೋ ಅವರು ನೀಡಬೇಕಿರುತ್ತದೆ. ಇದೀಗ ದೀಪಿಕಾ ಪಡುಕೋಣೆ ಹೆಸರನ್ನು ಯಾರು ನಾಮಿನೇಟ್ ಮಾಡಿದ್ದರೋ ಅವರು ಈ ಹಣವನ್ನು ತೆರಬೇಕಾಗಿದೆ.

error: Content is protected !!
Scroll to Top