(ನ್ಯೂಸ್ ಕಡಬ) newskadaba.com ಮಂಗಳೂರು, ಎ.07. ಇತ್ತೀಚೆಗೆ ಫ್ಲಿಪ್ಕಾರ್ಟ್ ನಲ್ಲಿ ಖರೀದಿಸಿದ ಮೊಬೈಲ್ ಫೋನೊಂದು ಕೈಯಲ್ಲಿ ಹಿಡಿದಿರುವಾಗಲೇ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಮಂಗಳೂರು ಹೊರವಲಯದ ಫರಂಗಿಪೇಟೆಯಲ್ಲಿ ಶನಿವಾರದಂದು ನಡೆದಿದೆ.
ಫರಂಗಿಪೇಟೆ ನಿವಾಸಿ ಶರೀಖ್ ಮಹಮ್ಮದ್ ಇಬ್ರಾಹಿಂ ಎಂಬವರು 2018 ಜನವರಿ 19 ರಂದು ಫ್ಲಿಪ್ಕಾರ್ಟ್ ನಲ್ಲಿ ಐವೊಮಿ ಕಂಪನಿಗೆ ಸೇರಿದ 6500 ಬೆಲೆಯ ಮೊಬೈಲನ್ನು ಖರೀದಿಸಿದ್ದರು. ಶನಿವಾರದಂದು ಮೊಬೈಲನ್ನು ತನ್ನ ಕೈಯಲ್ಲಿ ಹಿಡಿದಿದ್ದ ಸಂದರ್ಭದಲ್ಲಿ ಏಕಾಏಕಿ ಮೊಬೈಲ್ ಒಳಗಿನಿಂದ ಶಬ್ದವೊಂದು ಕೇಳಿ ಬಂದಿದ್ದು, ಇದರಿಂದ ಭಯಭೀತರಾದ ಶರೀಖ್ ಮೊಬೈಲನ್ನು ಮೇಜಿನ ಮೇಲೆ ಇಟ್ಟಿದ್ದಾರೆ. ತಕ್ಷಣವೇ ಮೊಬೈಲ್ ನಲ್ಲಿ ಬೆಂಕಿ ಕಾಣಿಸಿಕೊಂಡು ಮೊಬೈಲ್ ಬ್ಯಾಕ್ಟರಿ ಸಂಪೂರ್ಣ ಹೊತ್ತಿ ಉರಿದಿದ್ದು, ಉಳಿದ ಬಿಡಿ ಭಾಗಗಳೂ ಸುಟ್ಟು ಕರಕಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಉಷ್ಣತೆ ಹೆಚ್ಚಾಗುತ್ತಿರುವುದರಿಂದಾಗಿ ಮೊಬೈಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಸಂಶಯಿಸಲಾಗಿದೆ.