ಆಲಂಕಾರು: ಸಾಫ್ಟ್ ಡ್ರಿಂಕ್ ಸಾಗಾಟದ ವಾಹನ ಟೆಲಿಫೋನ್ ಕಂಬಕ್ಕೆ ಢಿಕ್ಕಿ ► ಕಂಬ ತಲೆಯ ಮೇಲೆ ಬಿದ್ದು ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಎ.07. ಸಾಫ್ಟ್ ಡ್ರಿಂಕ್ ಸಾಗಾಟದ ವಾಹನವೊಂದು ಟೆಲಿಫೋನ್ ಕಂಬಕ್ಕೆ ಢಿಕ್ಕಿ ಹೊಡೆದು ಕಂಬ ತಲೆಯ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಆಲಂಕಾರಿನಲ್ಲಿ ಶನಿವಾರ ಅಪರಾಹ್ನ ನಡೆದಿದೆ.

ಮೃತರನ್ನು ಕಡಬ ತಾಲೂಕಿನ ಪೆರಾಬೆ ಗ್ರಾಮದ ಬಾಲಾಜೆ ನಿವಾಸಿ ದಿ| ಅಂಗಾರ ಎಂಬವರ ಪುತ್ರ ಗಿರೀಶ್ (43) ಎಂದು ಗುರುತಿಸಲಾಗಿದೆ. ಆಲಂಕಾರು ಮದ್ಯದಂಗಡಿಯ ಮುಂಭಾಗದಲ್ಲಿದ್ದ ಟೆಲಿಫೋನ್ ಕಂಬಕ್ಕೆ ಭವಾನಿ ಸಾಫ್ಟ್ ಡ್ರಿಂಕ್ ಸಾಗಾಟದ ವಾಹನವು ಹಿಮ್ಮುಖವಾಗಿ ಚಲಿಸಿ ಢಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ಟೆಲಿಫೋನ್ ಕಂಬವು ಅಲ್ಲೇ ಪಕ್ಕದಲ್ಲಿದ್ದ ಗಿರೀಶ್ ರವರ ತಲೆಯ ಮೇಲೆ ಬಿದ್ದಿದೆ. ತಕ್ಷಣವೇ ಗಿರೀಶ್ ರವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ.

Also Read  ಹೊನ್ನಾವರ: ಪರೇಶ್ ಮೇಸ್ತ ಸಾವಿನ ತನಿಖೆಯನ್ನು NIA ಗೆ ವಹಿಸಲು ಆಗ್ರಹ ► ಕಡಬದ ಹಿಂದೂ ಸಂಘಟನೆಗಳ ವತಿಯಿಂದ ಪ್ರತಿಭಟನೆ

error: Content is protected !!
Scroll to Top