ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನಾಳೆ (ಎ.08) ‘ಮಿಂಚಿನ ನೋಂದಣಿ’ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.07. ಮುಂದಿನ ತಿಂಗಳು‌ ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲು ಬಾಕಿಯಾಗಿದೆಯೇ…? ಹಾಗಿದ್ದಲ್ಲಿ ನಿಮಗೊಂದು ಸುವರ್ಣಾವಕಾಶವೊಂದಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು‌ ಬಿಟ್ಟು ಹೋಗಿರುವವರಿಗೆ, ತಿದ್ದುಪಡಿ ಮಾಡಲಿರುವವರಿಗೆ ನಾಳೆ (ಎಪ್ರಿಲ್ 8 ಭಾನುವಾರ)ದಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಚುನಾವಣಾ ಆಯೋಗವು “ಮಿಂಚಿನ ನೋಂದಣಿ” ಸೌಲಭ್ಯವನ್ನು ಆಯೋಜಿಸಿದೆ. ನಿಮ್ಮ ಹೆಸರು ಓಟರ್ ಲಿಸ್ಟ್ ನಲ್ಲಿ ಇದೆಯೋ ಇಲ್ಲವೋ ಎಂಬುವುದನ್ನು ಮರೆಯದೇ ಪರಿಶೀಲಿಸಿ ಅದೇ ರೀತಿ ಹೆಸರು ನೊಂದಾವಣೆ ಇದ್ದಲ್ಲಿ ಕೂಡಲೆ ಮಿಂಚಿನ ವೇಗದಲಿ ಹೆಸರು ಸೇರಿಸಿ ಮತದಾನದ ಹಕ್ಕನ್ನು ಪಡೆಯಬಹುದಾಗಿದೆ. ಹದಿನೆಂಟು ವರ್ಷ ಪೂರ್ತಿಯಾಗಿರುವ ಎಲ್ಲರೂ ಇದರ ಪ್ರಯೋಜನ ಪಡೆಯಬಹುದಾಗಿದೆ.

Also Read  ಸುಳ್ಯ: ಎಸ್ಕೆಎಸ್ಸೆಸ್ಸೆಫ್ ತ್ವಲಬಾ ವಿಂಗ್ ವತಿಯಿಂದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮ

error: Content is protected !!
Scroll to Top