8 ವರ್ಷಗಳಿಂದ ವಿತರಣೆಯಾಗದ ಪ್ಯಾಡ್ ಗಳಿಗೆ ಬೆಂಕಿ ಹಚ್ಚಿದ ಸಿಬ್ಬಂದಿ..!



(ನ್ಯೂಸ್ ಕಡಬ) newskadaba.com  ಜೂ. 30. ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ 8 ವರ್ಷಗಳಿಂದ ವಿತರಿಸದೇ ಇದ್ದ 1 ಲಕ್ಷಕ್ಕೂ ಹೆಚ್ಚು ಸ್ಯಾನಿಟರಿ ಪ್ಯಾಡ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಕಲಬುರ್ಗಿಯ ಫರಹತಾಬಾದ್ ಎಂಬಲ್ಲಿಂದ ವರದಿಯಾಗಿದೆ.





 

ಪೀರಿಯೆಡ್ಸ್ ಸಮಯದಲ್ಲಿ ಮಹಿಳೆಯರಿಗೆ ಸಮಸ್ಯೆ ಆಗಬಾರದು ಎಂದು ಸರ್ಕಾರ ಆರೋಗ್ಯ ಇಲಾಖೆ ಮೂಲಕ ನೀಡಲಾದ ಉಚಿತ ಸ್ಯಾನಿಟರಿ ಪ್ಯಾಡ್‌ ಗಳ 1 ಲಕ್ಷಕ್ಕೂ ಅಧಿಕ ಶುಚಿ ಪ್ಯಾಡ್‌ಗಳನ್ನು ಸುಟ್ಟು ಹಾಕಲಾಗಿದೆ. ಫರಹತಾಬಾದ್‌ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ 15 ಹಳ್ಳಿಯ ಮಹಿಳೆಯರಿಗೆ ಇದನ್ನು ಹಂಚಬೇಕಾಗಿತ್ತು. ಆದರೆ, ಕಳೆದ 2017ರಲ್ಲಿ ತಯಾರಾಗಿದ್ದ ಪ್ಯಾಡ್‌ ಗಳು 2021ರವರೆಗೆ ವ್ಯಾಲಿಡಿಟಿ ಇತ್ತು ಆದರೆ ವಿತರಿಸದೇ ಹಾಗೇ ಬಿಟ್ಟಿದ್ದಾರೆನ್ನಲಾಗಿದೆ.






ಆರೋಗ್ಯ ಕೇಂದ್ರದ ಕಟ್ಟಡ ಹಳೆಯದಾಗಿದ್ದು, ಅದನ್ನು ತೆರವು ಮಾಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಈ ವೇಳೆ ಕಟ್ಟಡದ ತುಂಬೆಲ್ಲಾ ವಿತರಣೆಯಾಗದ ಸ್ಯಾನಿಟರಿ ಪ್ಯಾಡ್ ಗಳು 100ಕ್ಕೂ ಹೆಚ್ಚು ಬಾಕ್ಸಗಳಲ್ಲಿ ಪತ್ತೆಯಾಗಿದ್ದು, ಇದನ್ನು ಕಂಡ ಪಿಎಚ್‌ಸಿಯ ಕೆಲ ಸಿಬ್ಬಂದಿಗಳು ಕೂಡಲೇ ಪ್ಯಾಡ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಸ್ಥಳೀಯರು ಸ್ಥಳಕ್ಕೆ ಬಂದು ನೋಡುತ್ತಿದ್ದಂತೆ ಸಿಬ್ಬಂದಿ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top