(ನ್ಯೂಸ್ ಕಡಬ) newskadaba.com ಜೂ. 28. ವರ್ಕಾಡಿ ನಲ್ಲೆಂಗಿಯ ಹಿಲ್ಡಾ ಮೊಂತೇರೋರವರ ಕೊಲೆ ಪ್ರಕರಣಕ್ಕೆ ಸಂಬಂಧಿಸದಂತೆ ಆರೋಪಿ ಪುತ್ರ ಮೆಲ್ವಿನ್ ವಿಚಾರಣೆ ವೇಳೆ ಆಸ್ತಿ ಹಾಗೂ ಹಣಕ್ಕಾಗಿ ಈ ಕೃತ್ಯ ನಡೆಸಿದ್ದಾನೆ ಎಂದು ಬೆಚ್ಚಿ ಬೀಳಿಸುವ ಹೇಳಿಕೆಗಳನ್ನು ನೀಡಿದ್ದಾನೆ.
ಈ ವಿಚಾರವಾಗಿ ಕೆಲ ದಿನಗಳಿಂದ ಈತ ತಾಯಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಮಾತ್ರವಲ್ಲದೇ ಒತ್ತಡ ಹೇರುತ್ತಿದ್ದನು ಎನ್ನಲಾಗಿದೆ. ತನಗೆ ವಿವಾಹ ಮಾಡಿಕೊಡಬೇಕು ಇದಕ್ಕಾಗಿ ಹಣ ನೀಡುವಂತೆ ಮೆಲ್ವಿನ್ ತಾಯಿಯಲ್ಲಿ ಒತ್ತಡ ಹಾಕುತ್ತಿದ್ದನು. . ಇದಲ್ಲದೇ ಆಸ್ತಿಯನ್ನು ವಿವಾಹದ ಬಳಿಕ ತನ್ನ ಹೆಸರಿಗೆ ಬರೆದು ಕೊಡುವಂತೆಯೂ ಒತ್ತಡ ಹೇರಿದ್ದು, ಇದಕ್ಕೆ ತಾಯಿ ಹಿಲ್ಡಾ ಡಿ ಸೋಜ ನಿರಾಕರಿಸಿದ್ದರು ಈ ದ್ವೇಷದಿಂದ ಕೃತ್ಯ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗುರುವಾರದಂದು ಮುಂಜಾನೆ ಆರೋಪಿ ಮೆಲ್ವಿನ್ ತಾಯಿ ಹಿಲ್ಡಾರ ತಲೆಗೆ ಸೌದೆಯಿಂದ ತಲೆಗೆ ಹೊಡೆದಿದ್ದರಿಂ ನೆಲಕ್ಕೆ ಬಿದ್ದ ಹಿಲ್ಡಾರ ಕತ್ತು ಹಿಸುಕಿ ಕೊಲೆಗೈದು ಬಳಿಕ ಮನೆಯಿಂದ ಎಳೆದೊಯ್ದು ತ್ಯಾಜ್ಯಗಳನ್ನು ರಾಶಿ ಹಾಕಿ ಮೃತದೇಹವನ್ನು ಸುಡಲು ಬೆಂಕಿ ಹಚ್ಚಿದ್ದನು. ಬಳಿಕ ನೆರೆಮನೆಯ ಲೋಲಿಟಾರವರನ್ನು ಮನೆಗೆ ಕರೆಸಿ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಆದರೆ ತಪ್ಪಿಸಿ ಓಡಿದ್ದರರಿಂದ ಲೋಲಿಟಾ ಅಪಾಯದಿಂದ ಪಾರಾಗಿದ್ದಾರೆ. ತನಗೆ ತಾಯಿ ಹಣ ನೀಡಲು ಲೋಲಿಟಾ ಅಡ್ಡಿ ಪಡಿಸುತ್ತಿದ್ದಾರೆಂಬ ಸಂಶಯದಿಂದ ಮೆಲ್ವಿನ್ ಲೋಲಿಟಾರ ಕೊಲೆಗೂ ಯತ್ನಿಸಿದ್ದಾನೆ ಎಂದು ಈತ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.








