(ನ್ಯೂಸ್ ಕಡಬ) newskadaba.com ಜೂ.28: ರಾಜ್ಯಾದ್ಯಂತ ಮಳೆ ಮುಂದುವರೆದಿದ್ದು, ಜುಲೈ 3ರ ವರೆಗೂ ವರುಣನ ಆರ್ಭಟ ಮುಂದುವರೆಯಲಿದೆ. ರಾಜ್ಯ ಹವಾಮಾನ ಇಲಾಖೆಯು ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಇನ್ನುಳಿದಂತೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು ಬೆಳಗಾವಿ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ವಿಜಯನಗರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶೃಂಗೇರಿ, ಕೊಪ್ಪ, ವಿರಾಜಪೇಟೆ, ಕೊಟ್ಟಿಗೆಹಾರ, ಬೆಳ್ತಂಗಡಿ, ಯಲ್ಲಾಪುರ, ಕ್ಯಾಸಲ್ರಾಕ್, ಖಾನಾಪುರ, ಸೋಮವಾರಪೇಟೆ, ಪೊನ್ನಂಪೇಟೆ, ಸಿದ್ದಾಫುರ ಹಾಗೂ ಬನವಾಸಿಯಲ್ಲಿ ಶುಕ್ರವಾರ ಭಾರಿ ಮಳೆಯಾಗಿದೆ. ಕಾರ್ಕಳ, ಬಂಟವಾಳ, ಸುಳ್ಯ, ಗೇರುಸೊಪ್ಪ, ಹೊನ್ನಾವರ, ಮಾಣಿ, ಶಕ್ತಿನಗರ, ಕುಂದಾಪುರ, ಮೂಡುಬಿದಿರೆ, ಅಂಕೋಲಾ, ಬೆಳಗಾವಿ, ಆನವಟ್ಟಿ, ಸರಗೂರು, ಅಫ್ಝಲ್ಪುರ, ಮಂಕಿ, ಹಳಿಯಾಳ, ಮುಂಡಗೋಡು, ಪುತ್ತೂರು, ಉಡುಪಿ, ಗೋಕರ್ಣ, ಶಿರಾಲಿ, ಮಂಗಳೂರು, ಕೋಟಾ, ಬೀದರ್, ಕಿತ್ತೂರು, ಹಾವೇರಿ, ಚಿಂಚೋಳಿ, ಧಾರವಾಡ, ಹುಬ್ಬಳ್ಳಿ, ಹಿರೆಕೆರೂರು, ಕಲಬುರಗಿ, ಗುಬ್ಬಿ, ಜಗಳೂರು, ಭದ್ರಾವತಿ, ಕೋಣನೂರಿನಲ್ಲಿ ಮಳೆಯಾಗಿದೆ.









