ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 68.3 ಲಕ್ಷ ರೂ. ವಂಚನೆ- ದೂರು ದಾಖಲು



(ನ್ಯೂಸ್ ಕಡಬ) newskadaba.com ಜೂ. 27. ಆನ್‌ ಲೈನ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭದ ಭರವಸೆ ನೀಡಿ 68.3 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





 

ದೂರಿನ ಪ್ರಕಾರ, ಅಪರಿಚಿತರು ಅಜಿತ್ ಕುಮಾರ್ ಎಂಬವರನ್ನು ‘372 SCBI ಇನ್ವೆಸ್ಟಿಂಗ್ ಲ್ಯಾಬ್’ ಎಂಬ ವಾಟ್ಸಾಪ್ ಗುಂಪಿಗೆ ಸೇರಿಸಿ ಬಳಿಕ, ಗುಂಪಿನ ಸದಸ್ಯರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸುವ ಸಂದೇಶಗಳನ್ನು ಕಳುಹಿಸಿದ್ದಾರೆ. ಅಲ್ಲದೇ ಲಾಭದ ಭರವಸೆಯನ್ನೂ ನೀಡಿದ್ದಾರೆ. ಅವರ ಹೇಳಿಕೆಗಳನ್ನು ನಂಬಿದ ಅಜಿತ್, ಜೂನ್ 12 ರಿಂದ ಜೂನ್ 23ರ ನಡುವೆ ವಂಚಕರು ನೀಡಿದ ಬ್ಯಾಂಕ್ ಖಾತೆಗಳಿಗೆ NEFT ಮತ್ತು RTGS ವಹಿವಾಟುಗಳನ್ನು ಬಳಸಿಕೊಂಡು ಒಟ್ಟು 68,30,000 ರೂ.ಗಳನ್ನು ವರ್ಗಾಯಿಸಿದ್ದಾರೆ.






 

ಆದರೆ ಹಣ ಕಳುಹಿಸಿದ ನಂತರ ವಂಚಕರು, ದೂರುದಾರರು ಹೂಡಿಕೆ ಮಾಡಿದಂತಹ ಮೊತ್ತವನ್ನು ಅಥವಾ ಯಾವುದೇ ಲಾಭವನ್ನು ನೀಡದೇ ವಂಚನೆಗೊಳಗಾಗಿದ್ದು, ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top