ಸವಣೂರು: ಬಿಜೆಪಿ ಸಂಸ್ಥಾಪನ ದಿನಾಚರಣೆ

(ನ್ಯೂಸ್ ಕಡಬ) newskadaba.com ಸವಣೂರು, ಎ.6.  ಬಿಜೆಪಿ ಸವಣೂರು ಬೂತ್ ಸಂಖ್ಯೆ 65ರಲ್ಲಿ ಬಿಜೆಪಿ ಸಂಸ್ಥಾಪನ ದಿನಅಚರಣೆ ಹಾಗೂ ಮಹಿಳಾ ಅಭಿಯಾನ ಮತ್ತು ಬಿಜೆಪಿ ಗೆಲ್ಲಿಸಲು ಮನೆಮನೆ ಬೇಟಿ ಕಾರ್ಯ ನಡೆಸಲಾಯಿತು.

ಈ ಸಂದರ್ಭ ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ, ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಸಂಸ್ಥಾಪನ ದಿನಾಚರಣೆಯಂದೇ ಮಹಿಳಾ ಅಭಿಯಾನ ಹಾಗೂ ಮನೆಮನೆ ಭೇಟಿ ಕಾರ್ಯ ನಡೆಸುವ ಮೂಲಕ ಪ್ರಚಾರ ಆರಂಭವಾಗಿದೆ. ಈಗಾಗಲೇ ಕ್ಷೇತ್ರಾದ್ಯಂತ ಬಿಜೆಪಿ ಪರ ಕಾರ್ಯಕರ್ತರು ಪ್ರಚಾರ ಆರಂಭಿಸಿದ್ದಾರೆ. ಪಕ್ಷವನ್ನು ಗೆಲ್ಲಿಸುವ ಮೂಲಕ ಅಭಿವೃದ್ದಿ ಪರ ಆಡಳಿತ ನಡೆಸಲು ಜನತೆ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತನಿಗೂ ದೊಡ್ಡ ಜವಾಬ್ದಾರಿ ಇದೆ. ರಾಜ್ಯದ್ಯಂತ ಬಿಜೆಪಿ ಪರ ಅಲೆ ಹಾಗೂ ಕಾಂಗ್ರೇಸ್ ಸರಕಾರದ ದುರಾಡಳಿತ, ಒಡೆದು ಆಳುವ ನೀತಿ ಕಣ್ಣೆದುರೇ ಇರುವುದರಿಂದ, ಜತೆಗೆ ನರೇಂದ್ರ ಮೋದಿ ನೇತೃತ್ವದ ಕಳಂಕ ರಹಿತ ಆಡಳಿತಕೂಡ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ವರದಾನವಾಗಲಿದೆ ಎಂದರು.

Also Read  ಕಡಬದ ಇಬ್ಬರಲ್ಲಿ ಕೊರೋನಾ ಪಾಸಿಟಿವ್ ದೃಢ

ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಕುದ್ಮನಮಜಲು, ರಾಜೀವಿ ಶೆಟ್ಟಿ ಕೆಡೆಂಜಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಮಗದ ನಿರ್ದೇಶಕಿ ವೇದಾವತಿ ಕೆಡೆಂಜಿ, ಬಿ. ಸುಪ್ರಿತ್ ರೈ ಖಂಡಿಗ, ಪೂವಪ್ಪ ನಾಯ್ಕ ಬರೆಮೇಲು, ಬಿಜೆಪಿ ಮಹಿಳಾ ಪ್ರಮುಖ್ ವೇದಾ ದಯಾನಂದ ಬೇರಿಕೆ, ಬಿಜೆಪಿ ಸವಣೂರು ಪಂಚಾಯತ್ ಸಮಿತಿ ಸದಸ್ಯೆ ಅನಿತಾ ಲಕ್ಷ್ಮಣ ಗೌಡ, ಮೋನಪ್ಪ ನಾಯ್ಕ, ಮೀನಾಕ್ಷಿ ಬಾರಿಕೆ ಮೊದಲಾದವರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Also Read  ಕುಕ್ಕೆ ಸುಬ್ರಹ್ಮಣ್ಯದ ಗರ್ಭಗುಡಿಯಿಂದ ➤ ಆನ್ ಲೈನ್ ವಿಡಿಯೋ ಸರಿಯಲ್ಲ

error: Content is protected !!
Scroll to Top