ಮೇ 07 ರಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ► ಎಪ್ರಿಲ್ ಅಂತ್ಯಕ್ಕೆ ದ್ವಿತೀಯ ಪಿಯು ಫಲಿತಾಂಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.07. ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮುಕ್ತಾಯಗೊಂಡಿದ್ದು, ಮೇ 07 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವರು, ಮೇ 08 ರಂದು ಆಯಾ ಶಾಲೆಗಳಲ್ಲಿ ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಈ ಬಾರಿಯ ಪರೀಕ್ಷಾ ಸುಧಾರಣಾ ಕ್ರಮಗಳು ತೃಪ್ತಿ ತಂದಿದ್ದು, ಮೇ 07 ರಂದು ವಿದ್ಯಾರ್ಥಿಗಳು ಫಲಿತಾಂಶ ನಿರೀಕ್ಷಿಸಬಹುದು ಎಂದರು. ಏಪ್ರಿಲ್ ಕೊನೆಯ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವೂ ಪ್ರಕಟ ಪಡಿಸಲಾಗುವುದೆಂದು ತನ್ವೀರ್ ಸೇಠ್ ಸ್ಪಷ್ಟಪಡಿಸಿದ್ದಾರೆ.

Also Read  ತಮ್ಮನ ಸಾವಿನ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಅಕ್ಕ..!

error: Content is protected !!
Scroll to Top