(ನ್ಯೂಸ್ ಕಡಬ) newskadaba.com ಜೂ. 21. ಮಳೆಗಾಲದ ಸಮಯದಲ್ಲಿ ಒಂದು ಜಾತಿಯ ಕೀಟವೊಂದು ಮನೆಯ ಮುಂದೆ, ಮನೆ ಒಳಗೆ ಎಲ್ಲೆಂದರಲ್ಲಿ ಅದರ ರೆಕ್ಕೆ ತುಂಡಾಗಿ ಬಿದ್ದಿರುತ್ತವೆ. ಮಳೆ ಬಂದ ಎರಡು ಮೂರು ದಿನಗಳವರೆಗೆ ಹಾಗೆಯೇ ಅಲ್ಲಲ್ಲಿ ಬಿದ್ದಿರುತ್ತವೆ. ಈ ಕೀಟವು ಬಲ್ಬ್ ನ ಬೆಳಕಿಗೆ ಹೆಚ್ಚಾಗಿ ಮನೆ ಒಳಗೆ ಪ್ರವೇಶಿಸುತ್ತವೆ. ಇದಕ್ಕೆ ಈಗಲೂ ಹೆಚ್ಚಾಗಿ ಹಳ್ಳಿ ಕಡೆ ಹೊರಗಿನ ಬಲ್ಬ್ ನ್ನು ಮಾತ್ರ ಉರಿಸಿ ಒಳಗೆ ಕತ್ತಲು ಮಾಡಿ ಒಳಬರದಂತೆ ತಡೆಯುತ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣ ಇದೆಯೋ ಇಲ್ವೋ ಗೊತ್ತಿಲ್ಲ ಆದರೂ ಈ ಬೆಳಕನ್ನು ಆಫ್ ಮಾಡುವುದರಿಂದ ಮನೆಯೊಳಗೆ ಪ್ರವೇಶಿಸುವುದಿಲ್ಲ. ಹೀಗೆ ನಿಮ್ಮ ಮನೆಯಲ್ಲೂ ಈ ಮಳೆ ಬರುವಾಗ ಇಂತಹ ಕೀಟಗಳ ಕಾಟ ಶುರುವಾಗುತ್ತಾ ಹಾಗಾದ್ರೆ ಈ ಕೀಟಗಳು ಬಾರದಂತೆ ತಡೆಯಲು ಇಲ್ಲಿದೆ ಕೆಲವೊಂದು ಟಿಪ್ಸ್.
ನಿಂಬೆ ರಸ- ನಿಂಬೆ ರಸವನ್ನು ನೀರಿನಲ್ಲಿ ಮಿಕ್ಸ್ ಮಾಡಿ ಕೀಟಗಳ ಮೇಲೆ ಸಿಂಪಡಿಸಿ. ಹೀಗೆ ಮಾಡೋದರಿಂದ ಕೀಟಗಳು ಓಡಿ ಹೋಗುತ್ತವೆ.
ಲವಂಗದ ನೀರಿನ ಸ್ಪ್ರೇ- ಮಳೆಗಾಲದಲ್ಲಿ ಕೀಟಗಳನ್ನು ತೊಡೆದುಹಾಕಲು ಈ ಸರಳ ಸ್ಪ್ರೇ ಅನ್ನು ಮನೆಯಲ್ಲಿಯೇ ತಯಾರಿಸಬಹುದು. ಈ ಸ್ಪ್ರೇ ಮಾಡಲು, ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ. ಈ ನೀರಿಗೆ ಲವಂಗ ಸೇರಿಸಿ. ನೀರಿನ ಬಣ್ಣ ಬದಲಾದಾಗ, ಅದಕ್ಕೆ ಒಂದು ಚಮಚ ಅಡಿಗೆ ಸೋಡಾ ಸೇರಿಸಿ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ತಣ್ಣಗಾಗಿಸಿ ಸ್ಪ್ರೇ ಬಾಟಲಿಯಲ್ಲಿ ಹಾಕಿ. ಈಗ ನೀವು ಕೆಲವು ಬೇಡದ ಎಲೆಗಳನ್ನು ಕತ್ತರಿಸಿ ಅದಕ್ಕೆ ಸೇರಿಸಬೇಕು. ಈಗ ನಿಮ್ಮ ಸ್ಪ್ರೇ ಸಿದ್ಧವಾಗಿದೆ. ಈ ಸ್ಪ್ರೇ ಅನ್ನು ಕೀಟಗಳ ಮೇಲೆ ಸಿಂಪಡಿಸಿ, ಇದರಿಂದ ಕೀಟಗಳು ಓಡಿಹೋಗುತ್ತವೆ.
ಬಿಳಿ ವಿನೆಗರ್- ಸ್ಪ್ರೇ ಬಾಟಲಿಯಲ್ಲಿ ವಿನೇಗರ್ ತುಂಬಿಸಿ ಕೀಟಗಳ ಮೇಲೆ ಸಿಂಪಡಿಸಿ ಅಥವಾ ವಿನೆಗರ್ ನೀರಿನಿಂದ ನೆಲವನ್ನು ಒರೆಸಿ. ಹೀಗೆ ಮಾಡುವುದರಿಂದ, ಕೀಟಗಳು ನೆಲದಿಂದ ಓಡಿಹೋಗುತ್ತವೆ.
ಉಪ್ಪು- ಕೀಟಗಳನ್ನು ಕೊಲ್ಲಲು ಉಪ್ಪು ಅಥವಾ ಉಪ್ಪು ನೀರನ್ನು ಅವುಗಳ ಮೇಲೆ ಸಿಂಪಡಿಸಬಹುದು. ಇದು ಕೀಟಗಳನ್ನು ಕೊಲ್ಲುತ್ತದೆ.
ಬೆಳ್ಳುಳ್ಳಿ- ಬೆಳ್ಳುಳ್ಳಿಯನ್ನು ಪುಡಿಮಾಡಿ ನೀರಿಗೆ ಸೇರಿಸಿ ಚೆನ್ನಾಗಿ ಅಲ್ಲಾಡಿಸಿ. ಈ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಮಿಶ್ರಣವು ಕೀಟಗಳನ್ನು ಓಡಿಸುತ್ತದೆ.








