ಬೆಳಂದೂರು ಬಿಜೆಪಿ ವತಿಯಿಂದ ಪಕ್ಷ ಸಂಸ್ಥಾಪನಾ ದಿನಾಚರಣೆ

(ನ್ಯೂಸ್ ಕಡಬ) newskadaba.com ಸವಣೂರು, ಎ.6. ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಬೆಳಂದೂರು ವಾರ್ಡ್ 73ರಲ್ಲಿ ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಚಂದ್ರಯ್ಯ ಆಚಾರ್ಯ ಇವರ ಮನೆಯಲ್ಲಿ ಪಕ್ಷದ ಧ್ವಜ ಹಾರಿಸುವುದರೊಂದಿಗೆ ಆಚರಿಸಲಾಯಿತು. ಪಕ್ಷದ ಹಿರಿಯ ಕಾರ್ಯಕರ್ತರಾದ ಜನಾರ್ದನ ಅಚಾರ್ಯರವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಬೂತ್ ಸಮಿತಿಯ ಅಧ್ಯಕ್ಷರಾದ ಪ್ರಮೋದ್ ನೀರಜರಿಯವರು ಸ್ವಾಗತಿಸಿ ಕಾರ್ಯದರ್ಶಿ ಯೋಗೀಶ್ ವಂದಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜನಾತ ಬಜಾರ್ ಇದರ ಅಧ್ಯಕ್ಷರಾದ ಉದಯ ರೈ ಮಾದೋಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರಮೀಳಾ ಜನಾರ್ದನ, ಗ್ರಾಮ ಪಂಚಾಯತ್ ಸದಸ್ಯರಾದ ಜಯಂತ ಅಬೀರ, ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ ಚಂಪಾ ಕುಶಾಲಪ್ಪ ಅಬೀರ, ಕಾರ್ಯಕರ್ತರಾದ ದೀಕ್ಷಿತ್ ಹೊಸೊಳಿಗೆ, ಯಮುನಾ, ಕವಿತಾ, ವೇದಾವತಿ, ಶ್ರುತಿ ರವರು ಉಪಸ್ಥಿತರಿದ್ದರು.

Also Read  ಬೆಳ್ತಂಗಡಿ : ಆಶಾ ಕಾರ್ಯಕರ್ತೆ ಮೇಲೆ ಪತಿಯಿಂದಲೇ ಹಲ್ಲೆ

error: Content is protected !!
Scroll to Top