(ನ್ಯೂಸ್ ಕಡಬ) newskadaba.com ಜೂ. 20. ಪಾನ್ ಶಾಪ್ ಒಂದರಲ್ಲಿ ವ್ಯಕ್ತಿಯೊಬ್ಬ ಚಾಕಲೇಟ್ ನಂತೆ ಕಾಣುವ ಮಾದಕ ದ್ರವ್ಯದ ಸುವಾಸನೆಯುಳ್ಳ ಚಾಕಲೇಟ್ ಮಾರಾಟ ನಡೆಸುತ್ತಿದ್ದ ವೇಳೆ ಮಂಗಳೂರು ಉಪವಿಭಾಗದ ಅಬಕಾರಿ ಪೊಲೀಸರು ದಾಳಿ ನಡೆಸಿ ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬಂಧಿತನನ್ನು ಉತ್ತರ ಪ್ರದೇಶ ಮೂಲದ ಸುಜಿತ್ ಕುಮಾರ್ ಎಂದು ಗುರುತಿಸಲಾಗಿದೆ. ಆತನಿಂದ 303 ಗ್ರಾಂ. ಬಮ್ ಬಮ್ ಚಾರ್ ಮಿನಾರ್ ಹೆಸರಿನ ಮಾದಕ ದ್ರವ್ಯ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಎನ್.ಡಿ.ಪಿ.ಎಸ್ ಆಕ್ಟ್ 1985 ಕಲಂ 8(c) 20(b)(11)(A) & 25ರಂತೆ ಪ್ರಕರಣ ದಾಖಲಾಗಿದೆ.
ಮಂಗಳೂರು ಉಪವಿಭಾಗದ ಅಬಕಾರಿ ಉಪಾಧೀಕ್ಷಕಿ ಗಾಯತ್ರಿ ಸಿ.ಹೆಚ್. ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮಂಗಳೂರು ಉಪ ವಿಭಾಗ ಉಪನೀರಿಕ್ಷಕರಾದ ಸುಧೀರ್ ಕುಮಾರ್ ಪ್ರಕರಣ ದಾಖಲಿಸಿದ್ದಾರೆ. ಉಪನಿರೀಕ್ಷಕ ಹರೀಶ್ ಪಿ, ಹೆಡ್ ಕಾನ್ಸ್ಟೇಬಲ್ ಸಂಧ್ಯಾ ಭಟ್, ಕಾನ್ಸ್ಟೇಬಲ್ ಮಾರುತಿ ಡಿ.ಜೆ. ಮತ್ತು ವಾಹನ ಚಾಲಕ ಹರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.








