ಕಾಣಿಯೂರು: ಬಿಜೆಪಿ ವತಿಯಿಂದ ಪಕ್ಷ ಸಂಸ್ಥಾಪನಾ ದಿನಾಚರಣೆ



(ನ್ಯೂಸ್ ಕಡಬ) newskadaba.com ಸವಣೂರು, ಎ.6. ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಕಾಣಿಯೂರು ಬಿಜೆಪಿ ವಾರ್ಡ್ 81 ರ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ ಇವರ ಮನೆಯಲ್ಲಿ  ಆಚರಿಸಲಾಯಿತು.





ಬೆಳಂದೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಧರ್ಮೇಂದ್ರ ಕಟ್ಟತ್ತಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಹಿರಿಯ ಕಾರ್ಯಕರ್ತ ರಾಮಣ್ಣ ಗೌಡ ಮುಗರಂಜ ಸ್ವಾಗತಿಸಿ, ಕಾಣಿಯೂರು ಶಕ್ತಿ ಕೇಂದ್ರದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ ವಂದಿಸಿದರು. ಕಾರ್ಯದರ್ಶಿ ಸುರೇಶ್ ಓಡಬಾಯಿ, ಕಾರ್ಯಕರ್ತರಾದ ಕುಶಾಲಪ್ಪ ಗೌಡ ಮುಗರಂಜ, ಪರಮೇಶ್ವರ ಗೌಡ, ಸುಂದರ ಬೆದ್ರಾಜೆ, ಪರಮೇಶ್ವರ ಎಂ.ಪಿ., ದಿನೇಶ್ ಮುಗರಂಜ, ಸಂತೋಷ್. ಎಂ, ಕಿರಣ್ ಎಂ., ರಂಜಿತ್ ಎಂ.ಆರ್, ಶೀಲಾವತಿ, ಶ್ವೇತಾ ಮುಗರಂಜ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






error: Content is protected !!
Scroll to Top