ಸವಣೂರು: ಸ್ನೇಹ ಸಮ್ಮಿಲನ, ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸವಣೂರು, ಎ.6. ಯುವಕ ಮಂಡಲಗಳ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ. ಸವಣೂರು ಯುವಕ ಮಂಡಲವು ಕಳೆದ ಹಲವು ವರ್ಷಗಳಿಂದ ಅತ್ಯನ್ನತ ಚಟುವಟಿಕೆ ನಡೆಸುತ್ತಾ ಮಾದರಿಯಾಗಿದೆ ಎಂದು ಡಾ.ಶ್ಯಾಮ ಸುಂದರ ಕೆ. ಹೇಳಿದರು.ಅವರು ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ಆಶ್ರಯದಲ್ಲಿ ನಡೆಯುತ್ತಿರುವ ಯುವ ಸಪ್ತಾಹದ 2ನೇ ದಿನದ ಕಾರ್ಯಕ್ರಮ ಬೆಳ್ಳಿ ಹಬ್ಬ ವರ್ಷಾಚರಣಾ ಸಮಿತಿ ಮಿತ್ರ ಬಳಗ ಕಾಯರ್ತೋಡಿ ಸುಳ್ಯ ಇದರ ಸಹಯೋಗದಲ್ಲಿ ನಡೆದ ಸ್ನೇಹ ಮಿಲನ ಮತ್ತು ಸ್ವಚ್ಚತಾ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದರು.

ಬೆಳ್ಳಿ ಹಬ್ಬ ವರ್ಷಾಚರಣಾ ಸಮಿತಿ ಮಿತ್ರ ಬಳಗ ಕಾಯರ್ತೋಡಿ ಇದರ ಅಧ್ಯಕ್ಷ ಕುಸುಮಾದರ ಎ.ಟಿ. ಮಾತನಾಡಿ, ಸವಣೂರು ಯುವಕ ಮಂಡಲ ಹಾಗೂ ಕಾಯರ್ತೋಡಿ ಮಿತ್ರ ಬಳಗ ಜಿಲ್ಲಾ ಯುವಜನ ಮೇಳದಲ್ಲಿ ಸದಾ ಪರಸ್ಪರ ಎದುರಾಳಿಗಳಾಗಿರುತ್ತಿದ್ದೆವು. ಸವಣೂರು ಹಾಗೂ ಕಾಯರ್ತೋಡಿ ಯುವಕ ಮಂಡಲ ಇವುಗಳ ಕಾರ್ಯವೈಖರಿಯಲ್ಲಿ ಸಾಮ್ಯತೆ ಇದ್ದು ಈ ನಿಟ್ಟಿನಲ್ಲಿ ಎರಡೂ ಯುವಕ ಮಂಡಲಗಳ ಪದಾಧಿಕಾರಿಗಳನ್ನು ಒಟ್ಟು ಒಂದುಗೂಡಿಸಲು ಸ್ನೇಹ ಮಿಲನ ವೇದಿಕೆಯಾಯಿತು ಎಂದರು.

Also Read  ಬೆಳಂದೂರು ಗ್ರಾಮದ ಬೂತ್ 2ರ ಬಿಜೆಪಿ ಸಮಿತಿ ಸಭೆ

ವೇದಿಕೆಯಲ್ಲಿ ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಮೋಹನ ದೇವಾಡಿಗ, ಗಂಗಾಧರ ಪೆರಿಯಡ್ಕ, ಕಾಯರ್ತೋಡಿ ಮಿತ್ರಬಳಗ ಅಧ್ಯಕ್ಷ ದೇವಿಪ್ರಸಾದ್ ಜೆ.ಸಿ, ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಬಲ್ಯಾಯ, ಪ್ರಕಾಶ್ ಕುದ್ಮನಮಜಲು ಉಪಸ್ಥಿತರಿದ್ದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಪ್ರಸ್ತಾವನೆಗೈದರು.ಯುವಕ ಮಂಡಲದ ಅಧ್ಯಕ್ಷ ಯತೀಶ ಕುಮಾರ್ ಕೆ.ಎಂ.ಸ್ವಾಗತಿಸಿದರು.ಮಾಜಿ ಅಧ್ಯಕ್ಷ ಗಿರಿಶಂಕರ್ ಸುಲಾಯ ವಂದಿಸಿದರು.

ಇಂದು ಭಜನಾ ಕಾರ್ಯಕ್ರಮ
ಯುವ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಎ.6ರಂದು ಸವಣೂರು ರೈಲ್ವೇ ಗೇಟ್ ಬಳಿಯ ಸಂತಸದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ.
ಕಾಣಿಯೂರು ಪ್ರಗತಿ ಸಂಸ್ಥೆಯ ಮುಖ್ಯಗುರು ಗಿರಿಶಂಕರ ಸುಲಾಯ ಶುಭ ಚಾಲನೆ ನೀಡುವರು. ಭಾರತಿ ಗ್ರಾಮ ವಿಕಾಸ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್, ಸವಣೂರು ಪ್ರಾ.ಕೃ.ಪ.ಸ.ಸಂ.ದ ನಿರ್ದೇಶಕ ಗಣೇಶ್ ನಿಡ್ವಣ್ಣಾಯ, ಸವಣೂರು ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಅಂಗಡಿಮೂಲೆ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಬ್ಬಣ್ಣ ರೈ ಖಂಡಿಗ, ತಾಲೂಕು ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕು.ಗುರುಪ್ರಿಯಾ ನಾಯಕ್ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ

error: Content is protected !!
Scroll to Top