ಮಂಗಳೂರು: ಎಸ್ಸೆಸ್ಸೆಲ್ಸಿ ಕೊನೆಯ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಎ.06. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಮನೆಗೆ ತೆರಳಿದ್ದ ವಿದ್ಯಾರ್ಥಿನಿಯೋರ್ವಳು ತೀವ್ರ ಹೊಟ್ಟೆನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮೃತಳನ್ನು ಕೊಣಾಜೆ ಅಸೈಗೋಳಿ ನಿವಾಸಿ, ಮಂಗಳೂರಿನ ಬೋಳಾರ ಸೈಂಟ್ ಆನ್ಸ್ ಹೈಸ್ಕೂಲ್ ವಿದ್ಯಾರ್ಥಿನಿ ಸ್ವೀಡಲ್ ಸ್ವೀಟಿ ಡಿ’ಸೋಜ ಎಂದು ಗುರುತಿಸಲಾಗಿದೆ. ಈಕೆ ನಗರದ ರೊಸಾರಿಯೋ ಹೈಸ್ಕೂಲ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು, ಐದು ವಿಷಯಗಳ ಪರೀಕ್ಷೆಗಳನ್ನು ಬರೆದು ಪೂರ್ಣಗೊಳಿಸಿದ್ದಳು. ಶುಕ್ರವಾರದಂದು ಕೊನೆಯ ಪರೀಕ್ಷೆ ಬರೆಯಬೇಕಿದ್ದ ಈಕೆ ಬುಧವಾರದಂದು ಪರೀಕ್ಷೆ ಬರೆದು ಮನೆಗೆ ತೆರಳಿದ್ದ ವೇಳೆ ತೀವ್ರ ತರದ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಕೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

Also Read  ಪುಣ್ಚತ್ತಾರು: ಗಾಳಿ ಮಳೆಗೆ ಮುರಿದಿದ್ದ ಮರದ ಕೊಂಬೆ ➤ ತೋಟದಲ್ಲಿ ನಡೆಯುವಾಗ ತಲೆಗೆ ಬಿದ್ದು ಕಡಬದ ವ್ಯಕ್ತಿ ಮೃತ್ಯು

error: Content is protected !!
Scroll to Top