(ನ್ಯೂಸ್ ಕಡಬ) newskadaba.com ಜೂ.17. ಪೆಟ್ರೋಲ್ ಬಂಕ್ ಸಿಬ್ಬಂದಿಯ ಮೇಲೆ ಮಹಿಳೆಯೊರ್ವರು ಹಲ್ಲೆ ನಡೆಸಿ ಬಂದೂಕು ತೋರಿಸಿ ಹೆದರಿಸಿರುವ ಘಟನೆ ಉತ್ತರ ಪ್ರದೇಶದ ಬಿಲ್ ಗ್ರಾಮ್ ನ ಸ್ಯಾಂಡಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.
ಕಾರಿಗೆ ಸಿಎನ್ಜಿ ತುಂಬಿಸಲು ಬಂದಿದ್ದ ಕುಟುಂಬವೊಂದು ಪೆಟ್ರೋಲ್ ಬಂಕ್ ಸಿಬ್ಬಂದಿ ಜೊತೆ ಗಲಾಟೆ ಮಾಡಿಕೊಂಡಿದೆ. ಈ ವೇಳೆ ಮಾತಿನ ಚಕಮಕಿ ನಡೆದು ಕುಟುಂಬದ ಮಹಿಳೆಯೊಬ್ಬಳು ಸಿಬ್ಬಂದಿಯ ಎದೆಗೆ ಬಂದು ಗುರುತು ಸಿಗದಂತೆ ಗುಂಡು ಹಾರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಈ ವಿಡಿಯೋ ಪೆಟ್ರೋಲ್ ಬಂಕ್ ನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.