ಕಡಬ: ನಿವೃತ್ತ ಸೈನಿಕ ಹೃದಯಾಘಾತದಿಂದ ಮೃತ್ಯು



(ನ್ಯೂಸ್ ಕಡಬ) newskadaba.com ಕಡಬ, ಜೂ.18. ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು ಊರಿನಲ್ಲಿ ನೆಲೆಸಿದ್ದ ಸೈನಿಕರೋರ್ವರು ಡಿಢೀರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಘಟನೆ ಬುಧವಾರ ರಾತ್ರಿ ಕಡಬದಲ್ಲಿ ನಡೆದಿದೆ.





ಮೃತರನ್ನು ಮೂಲತಃ ಕೊಂಬಾರು ನಿವಾಸಿ ಪ್ರಸ್ತುತ ಕಳಾರ ಸಮೀಪದ ಅಲಾರ್ಮೆಯಲ್ಲಿ ವಾಸವಾಗಿದ್ದ ರಂಗಸ್ವಾಮಿ ಎಂಬವರ ಪುತ್ರ ನಿವೃತ್ತ ಸೈನಿಕ ಪ್ರಭಾಕರನ್ ಎಂದು ಗುರುತಿಸಲಾಗಿದೆ. ಒಂದು ವರ್ಷದ ಹಿಂದಷ್ಟೇ ಸೇನೆಯಿಂದ ನಿವೃತ್ತಿ ಪಡೆದು ಊರಿಗೆ ಆಗಮಿಸಿದ್ದ ಅವರು ಹೆತ್ತವರೊಂದಿಗೆ ಕುಟುಂಬ ಸಮೇತರಾಗಿ ವಾಸವಿದ್ದರು. ರಂಗಸ್ವಾಮಿ ಮತ್ತು‌ ಸೆಲ್ಲಾಯಿ ದಂಪತಿಗಳಿಗೆ ನಾಲ್ಕು ಮಕ್ಕಳಲ್ಲಿ ಇವರು ಕೊನೆಯ ಮಗನಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದರು. ನಂತರ ಕಡಬದ ಕಳಾರ ಬಳಿ ಜಾಗ ಖರೀದಿಸಿ ಮನೆ ನಿರ್ಮಿಸಿದ್ದ ಅವರು ವಾರದ ಹಿಂದೆಯಷ್ಟೇ ಅದ್ದೂರಿಯಾಗಿ ಗೃಹ ಪ್ರವೇಶವನ್ನು ಮಾಡಿದ್ದರು. ಇಂದು ಸಂಜೆ ಕಾರಿನಲ್ಲಿ ಬರುತ್ತಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದರಿಂದ ಕಡಬ ಸಮುದಾಯ ಆಸ್ಪತ್ರೆಗೆ ಆಗಮಿಸಿದ್ದು ಈ ವೇಳೆ ಆಸ್ಪತ್ರೆಯೊಳಗೆ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಮೃತಪಟ್ಟಿದ್ದಾರೆ. ಮೃತರು ಪತ್ನಿ ಇಬ್ಬರು ಪುಟಾಣಿ ಮಕ್ಕಳನ್ನು ಅಗಲಿದ್ದಾರೆ.






error: Content is protected !!
Scroll to Top