(ನ್ಯೂಸ್ ಕಡಬ) newskadaba.com ಸವಣೂರು,ಎ.4. ಇಲ್ಲಿನ ಅತಿಶಯ ಕ್ಷೇತ್ರ ಪುಷ್ಪಪುರ ಪುದುಬೆಟ್ಟು ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದ ಪಂಚ ಕಲ್ಯಾಣಪೂರ್ವಕ ಪ್ರತಿಷ್ಠಾ ಮಹೋತ್ಸವದ 17ನೇ ವಾರ್ಷಿಕೋತ್ಸವವು ಶಿವಮೊಗ್ಗದ ಶ್ರೀ ಹೊಂಬುಜ ಅತಿಶಯ ಕ್ಷೇತ್ರದ ಶ್ರೀ ಮದ್ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಎ.4 ರಂದು ನಡೆಯಿತು.
ಎ.4ರಂದು ಬೆಳಿಗ್ಗೆ ತೋರಣ ಮುಹೂರ್ತ, ವಿಮಾನ ಶುದ್ದಿ, ಮಂತ್ರನ್ಯಾಸ, ತಿಲಕನ್ಯಾಸ, ಭಗವಾನ್ ಚಂದ್ರನಾಥ ಸ್ವಾಮಿಯ ಕಲಾರೋಪಣೆ, ಮಧ್ಯಾಹ್ನ ಮಕ್ಕಳ ಬಸದಿಯ ಭಗವಾನ್ ಶ್ರೀ ಪಾಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ ಮಾತೆ ಶ್ರೀ ಪದ್ಮಾವತಿ ದೇವಿ ಹಾಗೂ ಕ್ಷೇತ್ರಪಾಲ ಆರಾಧನೆ, ಸಾಯಂಕಾಲ ಪದ್ಮಾವತಿ ದೇವಿಯ ಕಲಾರೋಪಣೆ, ರಾತ್ರಿ ಲಕ್ಷ ಹೂವಿನ ಪೂಜೆ, ನಂತರ ಶ್ರೀ ಮದ್ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳಿಂದ ಮಂಗಲ ಪ್ರವಚನ ಶುಭಾಶೀರ್ವಾದ, ಪದ್ಮಾವತಿ ದೇವಿಯ ಪಲ್ಲಕ್ಕಿ ಉತ್ಸವ, ಪುರ ಮೆರವಣಿಗೆ, ಕಟ್ಟೆ ಪೂಜೆಯ ಬಳಿಕ ಶ್ರೀ ಸರ್ವಾಹ್ನ ಯಕ್ಷರ ಬಲಿ ಉತ್ಸವ, ಭಗವಾನ್ ಚಂದ್ರನಾಥ ಸ್ವಾಮಿಗೆ 108 ಕಲಶಾಭಿಷೇಕ ಮಹಾಪೂಜೆ, ಮಹಾಮಂಗಳಾರತಿ ನಡೆಯಿತು.
ಅರ್ಚಕ ಶ್ರೇಯಾಂಸ ಕುಮಾರ್ ಇಂದ್ರ ಸ್ವಾಮೀಜಿಗಳ ಪಾದ ಪೂಜೆ ನೆರವೇರಿಸಿದರು.
ಈ ಸಂದರ್ಭ ಬಸದಿಯ ಆಡಳಿತ ಸಮಿತಿ ಅಧ್ಯಕ್ಷ ಶತ್ರುಂಜಯ ಆರಿಗ ಹಾಗೂ ಆಡಳಿತ ಸಮಿತಿ ಸದಸ್ಯರು ಜೈನ ಬಾಂಧವರು,ಜಿನ ಮಂದಿರದ ಭಕ್ತಾ„ಗಳು,ಪೂಜಾ ಸೇವಾಕರ್ತೃಗಳು ಉಪಸ್ಥಿತರಿದ್ದರು.